Sunday, August 23, 2026

BDA Apartments

Home Front Page ಪಠ್ಯಪುಸ್ತಕದಿಂದ ಟಿಪ್ಪು ಇತಿಹಾಸ ತೆಗೆಯುವ ವಿಚಾರ:  ಸಿಎಂ ಬಿಎಸ್ ವೈ ವಿರುದ್ದ ಮಾಜಿ ಸಿಎಂ ಸಿದ್ಧರಾಮಯ್ಯ...

ಪಠ್ಯಪುಸ್ತಕದಿಂದ ಟಿಪ್ಪು ಇತಿಹಾಸ ತೆಗೆಯುವ ವಿಚಾರ:  ಸಿಎಂ ಬಿಎಸ್ ವೈ ವಿರುದ್ದ ಮಾಜಿ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ…

ಬಾಗಲಕೋಟೆ,ಅ,30,2019(www.justkannada.in):  ಪಠ್ಯ ಪುಸ್ತಕದಿಂದ ಟಿಪ್ಪು ಇತಿಹಾಸವನ್ನ ತೆಗೆದು ಹಾಕಲು ಮುಂದಾಗಿರುವ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ದ ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.

ಟಿಪ್ಪು ಸುಲ್ತಾನ್ ಮತಾಂಧ ಅಲ್ಲ. ಬಿಜೆಪಿಯವರೇ ಮತಾಂಧರು ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ. ಬಾಗಲಕೋಟೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಟಿಪ್ಪು ಪಠ್ಯವನ್ನು ಪಠ್ಯಕ್ರಮದಿಂದ ಕೈಬಿಟ್ಟರೇ, ಇತಿಹಾಸ ತಿರುಚಿದಂತಾಗುತ್ತದೆ. ಬ್ರಿಟೀಷರ ವಿರುದ್ಧ ಟಿಪ್ಪು ಸುಲ್ತಾನ್ ಹೋರಾಡಿದ್ದು ಸುಳ್ಳಾ, ನಿಜಾನಾ.?   ಇತಿಹಾಸವನ್ನ ತಿರುಚುವ ಕೆಲಸ ಮಾಡಬಾರದು. ಇತಿಹಾಸ ತಿರುಚಬಾರದು. ಮಕ್ಕಳಿಗೆ ಇತಿಹಾಸ ಕಲಿಸಬೇಕು. ಇದರಿಂದ ಮಕ್ಕಳು ಅನೇಕ ವಿಚಾರಗಳನ್ನು ಕಲಿತಂತೆ ಆಗುತ್ತದೆ. ಎಂದು ಟಾಂಗ್ ನೀಡಿದ್ದಾರೆ.

ಇಂದು ಬೆಂಗಳೂರಿನಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಪಠ್ಯಪುಸ್ತಕದಿಂದ ಟಿಪ್ಪು ಇತಿಹಾಸವನ್ನ ತೆಗೆಯುತ್ತೇವೆ. ಅಂತಹ ಯಾವುದೇ ವಿಚಾರ ಪಠ್ಯಪುಸ್ತಕದಲ್ಲಿ ಇರಬಾರದು. ಹೀಗಾಗಿ ಈ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ. ಜತೆಗೆ ಟಿಪ್ಪು ಜಯಂತಿಯ ಎಲ್ಲಾ ಆದೇಶವನ್ನ ಹಿಂಪಡೆಯುತ್ತೇವೆ ಎಂದು ಹೇಳಿಕೆ ನೀಡಿದ್ದರು.

Key words: Tippu -history – textbook-Former CM -Siddaramaiah – against -CM BS yeddyurappa