ಹೈಕಮಾಂಡ್ ನನ್ನನ್ನ ಕಟ್ಟಿ ಹಾಕಿಲ್ಲ: ಫ್ರೀ ಹ್ಯಾಂಡ್ ನೀಡಿದೆ- ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ…

ಬೆಂಗಳೂರು,ಅ,30,2019(www.justkannada.in):  ಬಿಜೆಪಿ ಹೈಕಮಾಂಡ್ ನನ್ನನ್ನ ಕಟ್ಟಿ ಹಾಕಿಲ್ಲ. ನಮ್ಮ ವರಿಷ್ಠರು ಫ್ರಿ  ಹ್ಯಾಂಡ್ ನೀಡಿದ್ದಾರೆ.  ಕೆಲಸ ಮಾಡಲು ನನಗೆ ಸಂಪೂರ್ಣವಾಗಿ ಸ್ವಾತಂತ್ರ ನೀಡಿದ್ದಾರೆ ಎಂದು  ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಬಿಜೆಪಿ ಹೈಕಮಾಂಡ್ ಕಟ್ಟಿ ಹಾಕಿಲ್ಲ. ಎಲ್ಲರೂ ಸಂಪೂರ್ಣವಾಗಿ ಸ್ವಾತಂತ್ರ್ಯವನ್ನು ನನಗೆ ನೀಡಿದ್ದಾರೆ. ಹೈಕಮಾಂಡ್ ನನಗೆ ಫ್ರೀ ಹ್ಯಾಂಡ್ ನೀಡಿದೆ.  ಹೀಗಾಗಿ ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಎಲ್ಲಾ ವಿಚಾರದಲ್ಲೂ ನಾನು ಮುಕ್ತ ಅವಕಾಶದಿಂದ ನನ್ನ ಕೆಲಸವನ್ನ ನಿಭಾಯಿಸಿದ್ದೇನೆ ಎಂದು ಹೇಳಿದರು.

ಸಂತ್ರಸ್ತರ ಸಮಸ್ಯೆಯನ್ನ ಸರ್ಕಾರ ನಿಭಾಯಿಸಿದೆ. ನೆರೆ ಬರ ಎರಡು ಒಟ್ಟಿಗೆ ಬಂದಿದೆ. ರಾಜ್ಯ ಸರ್ಕಾರ ಇದಕ್ಕಾಗಿ 2,969 ಕೋಟಿ ರೂ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಿದೆ. ಅನೇಕ ಹಳ್ಳಿಗಳಲ್ಲಿನ ವಿದ್ಯುತ್ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಮಾಹಿತಿ ನೀಡಿದರು.

ಇನ್ನು ರಾಜ್ಯದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಂಪೂರ್ಣ ಸಹಕಾರ ನೀಡುತ್ತಿದೆ. ಬರ ನಿರ್ವಹಣೆ, ನೆರೆ, ಪ್ರವಾಹದಂತ ಪರಿಹಾರ ಕಾರ್ಯದಲ್ಲಿ ಸಕ್ರೀಯವಾಗಿ ಸ್ಪಂದಿಸುತ್ತಿದೆ ಎಂದು ಸಿಎಂ ಬಿಎಸ್ ವೈ ತಿಳಿಸಿದರು.

Key words:  High Command -Free Hand- CM BS Yeddyurappa-bangalore