ನೂತನ ಸಿಎಂ ಆಗುತ್ತಿರುವ ಡಿಕೆ ಶಿವಕುಮಾರ್ ಗೆ ಶುಭ ಕೋರಿದ MLC ಸಿ.ಟಿ ರವಿ

ಚಿಕ್ಕಮಗಳೂರು,ಜೂನ್,3,2026 (www.justkannada.in): ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಕೆಲವೇ ಕ್ಷಣಗಳಲ್ಲಿ ಡಿ.ಕೆ ಶಿವಕುಮಾರ್ ಅಧಿಕಾರ ಸ್ವೀಕಾರ ಮಾಡಲಿದ್ದು ಇದೀಗ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಶುಭ ಕೋರಿದ್ದಾರೆ.

ಈ ಕುರಿತು ಮಾತನಾಡಿರುವ ಎಂಎಲ್ ಸಿ ಸಿ.ಟಿ ರವಿ, ಡಿಕೆ ಶಿವಕುಮಾರ್ ಅವರಿಗೆ ಅಗಾಧವಾದ ರಾಜಕೀಯ  ಅನುಭವವಿದೆ.  ಹುರುಪು ಹುಮ್ಮಸ್ಸು ಇದೆ.  ಆದರೆ ಕೊರತೆ ಇರೋದು ಇಚ್ಛಾಶಕ್ತಿ.  ರಾಜ್ಯದ ಅಭಿವೃದ್ದಿಗೆ ಆದ್ಯತೆ ನೀಡಲಿ. ದೂರದೃಷ್ಠಿ ಯೋಜನೆಗಳನ್ನ ಜಾರಿ ಮಾಡಲಿ ಎಂದು ಹಾರೈಸಿದ್ದಾರೆ.

ಡಿಕೆ ಶಿವಕುಮಾರ್ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಕೇರಳ ಸಿಎಂ ಸತೀಶನ್ ಸೇರಿ ಹಲವರು ಭಾಗಿಯಾಗುತ್ತಿದ್ದಾರೆ.

Key words: MLC, CT Ravi, wishes, new CM, DK Shivakumar