ನವದೆಹಲಿ, ಜೂನ್ 1,2026 (www.justkannada.in): 2024ರ ಸಿವಿಲ್ ಸರ್ವಿಸ್ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಭಾರತೀಯ ಪೊಲೀಸ್ ಸೇವೆ (IPS)ಗೆ ಆಯ್ಕೆಯಾದ ಅಭ್ಯರ್ಥಿಗಳ ಕ್ಯಾಡರ್ ಹಂಚಿಕೆ ಪಟ್ಟಿಯನ್ನು ಕೇಂದ್ರ ಗೃಹ ಸಚಿವಾಲಯ (MHA) ಪ್ರಕಟಿಸಿದೆ. ಈ ಪಟ್ಟಿಯ ಪ್ರಕಾರ ಕರ್ನಾಟಕ ಕ್ಯಾಡರ್ಗೆ ಒಟ್ಟು 6 ಅಭ್ಯರ್ಥಿಗಳು ಹಂಚಿಕೆಯಾಗಿದ್ದಾರೆ.
ಕರ್ನಾಟಕ ಕ್ಯಾಡರ್ಗೆ ಹಂಚಿಕೆಯಾಗಿರುವ ಅಭ್ಯರ್ಥಿಗಳ ವಿವರ ಹೀಗಿದೆ:
ಆಕಾಶ್ (ದೆಹಲಿ) – ರ್ಯಾಂಕ್ 117
ಅಭಿಲಾಶ್ ಸುಂದರಂ (ದೆಹಲಿ) – ರ್ಯಾಂಕ್ 129
ಅಭಿನವ್ ಶರ್ಮಾ (ಉತ್ತರ ಪ್ರದೇಶ) – ರ್ಯಾಂಕ್ 130
ರಾಹುಲ್ ಸಿ ಯಾರಂಟೇಲಿ (ಕರ್ನಾಟಕ) – ರ್ಯಾಂಕ್ 462
ಮಹೇಶ್ ಆರ್ ಮಡಿವಾಳರ್ (ಕರ್ನಾಟಕ) – ರ್ಯಾಂಕ್ 482
ಸಂಪ್ರೀತ್ ಸಂತೋಷ್ (ಕರ್ನಾಟಕ) – ರ್ಯಾಂಕ್ 652
ಈ ಪೈಕಿ ದೆಹಲಿ ಹಾಗೂ ಉತ್ತರ ಪ್ರದೇಶ ಮೂಲದ ಮೂವರು ಅಭ್ಯರ್ಥಿಗಳು ಹೊರರಾಜ್ಯ ಕೋಟಾದಡಿ ಕರ್ನಾಟಕ ಕ್ಯಾಡರ್ ಪಡೆದಿದ್ದರೆ, ಕರ್ನಾಟಕ ಮೂಲದ ರಾಹುಲ್ ಸಿ ಯಾರಂಟೇಲಿ, ಮಹೇಶ್ ಆರ್ ಮಡಿವಾಳರ್ ಹಾಗೂ ಸಂಪ್ರೀತ್ ಸಂತೋಷ್ ತಮ್ಮ ರಾಜ್ಯದ ಕ್ಯಾಡರ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇದೇ ವೇಳೆ ಕರ್ನಾಟಕ ಮೂಲದ ಇನ್ನಿಬ್ಬರು ಅಭ್ಯರ್ಥಿಗಳಿಗೆ ಬೇರೆ ರಾಜ್ಯಗಳ ಕ್ಯಾಡರ್ ಹಂಚಿಕೆಯಾಗಿದೆ. ಪಾಂಡುರಂಗ ಎಸ್. ಕಾಂಬಳಿ ಅವರಿಗೆ ಅಸ್ಸಾಂ-ಮೇಘಾಲಯ ಹಾಗೂ ಶ್ರೇಯಸ್ ರಾವ್ ಜಿ ಅವರಿಗೆ ಆಂಧ್ರ ಪ್ರದೇಶ ಕ್ಯಾಡರ್ ನೀಡಲಾಗಿದೆ.
ಕೇಂದ್ರ ಸರ್ಕಾರವು ಭಾರತೀಯ ಪೊಲೀಸ್ ಸೇವೆ (ಕ್ಯಾಡರ್) ನಿಯಮಗಳು, 1954ರ ಅನ್ವಯ ಈ ಕ್ಯಾಡರ್ ಹಂಚಿಕೆ ಅಧಿಸೂಚನೆಯನ್ನು ಹೊರಡಿಸಿದೆ.
Key words: IPS ,cadre, allocation, 6 officers, selected, Karnataka







