Sunday, August 30, 2026

BDA Apartments

Home Front Page  ನಾಳೆ ಶಾಸಕಾಂಗ ಪಕ್ಷದ ಸಭೆ: ಪ್ರಮಾಣವಚನಕ್ಕೆ ದಿನ ನಿಗದಿಯಾಗಿಲ್ಲ- ಡಿಕೆ ಶಿವಕುಮಾರ್

 ನಾಳೆ ಶಾಸಕಾಂಗ ಪಕ್ಷದ ಸಭೆ: ಪ್ರಮಾಣವಚನಕ್ಕೆ ದಿನ ನಿಗದಿಯಾಗಿಲ್ಲ- ಡಿಕೆ ಶಿವಕುಮಾರ್

ಬೆಂಗಳೂರು,ಮೇ,29,2026 (www.justkannada.in):  ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ  ಬಳಿಕ ಸಿದ್ದರಾಮಯ್ಯ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನ ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ್ದು ಇತ್ತ ಡಿಕೆ ಶಿವಕುಮಾರ್ ಸಹ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ.

ಈ ಮಧ್ಯೆ ಮುಂದಿನ ರಾಜಕೀಯ ಚಟುವಟಿಕೆಗಳ ಬಗ್ಗೆ ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ಇಲ್ಲಿವರೆಗೂ ಯಾವುದೇ ಚರ್ಚೆ ಆಗಿಲ್ಲ.  ನಾಳೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಎಲ್ಲರಿಗೂ ಬೆಂಗಳೂರಿನಲ್ಲಿ ಇರಲು ಹೇಳಿದ್ದೇವೆ ಎಂದರು.

ಹಾಗೆಯೇ ಪ್ರಮಾಣ ವಚನಕ್ಕೆ ಇನ್ನೂ ದಿನ ನಿಗದಿಯಗಿಲ್ಲ. ಹೈಕಮಾಂಡ್ ನಾಯಕರನ್ನ ಕೇಳಿ ನಿರ್ಧರಿಸುತ್ತೇವೆ. ವಿಧಾನಸೌಧದ ಮುಂಭಾಗ ಪ್ರಮಾಣ ವಚನಕ್ಕೆ ಸಿದ್ದತೆ ನಡೆಸಲಾಗುತ್ತಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

Key words: Legislative party, meeting, tomorrow, DK Shivakumar