Monday, October 19, 2026

Dasara Wishes

Happy Dasara
Home Front Page ಕೆಪಿಸಿಸಿ ಅಧ್ಯಕ್ಷ ಸ್ಥಾನ ನನಗೆ ಬೇಡ: ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ- ಶಾಸಕ ತನ್ವೀರ್...

ಕೆಪಿಸಿಸಿ ಅಧ್ಯಕ್ಷ ಸ್ಥಾನ ನನಗೆ ಬೇಡ: ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ- ಶಾಸಕ ತನ್ವೀರ್ ಸೇಠ್

ಮೈಸೂರು,ಮೇ,29,2026 (www.justkannada.in): ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು ಇತ್ತ ರಚನೆಯಾಗುವ ಹೊಸ ಸಚಿವ ಸಂಪುಟದಲ್ಲಿ ಸೇರ್ಪಡೆಯಾಗಲು ಶಾಸಕರು ತೀವ್ರ ಲಾಬಿಗೆ ಮುಂದಾಗಿದ್ದಾರೆ. ಇದೀಗ ನಾನೂ ಕೂಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದ್ದಾರೆ.

ಇಂದು ಮಾಧ್ಯಮದ ಜೊತೆ ಮಾತನಾಡಿದ ಶಾಸಕ ತನ್ವೀರ್ ಸೇಠ್,  ನಮ್ಮ ಜಿಲ್ಲೆಯವರು ಸಿಎಂ ಆಗಿದ್ದ ಕಾರಣ ಸಚಿವ ಸ್ಥಾನ ತಪ್ಪಿತ್ತು. ಈ ಬಾರಿ ಆ ರೀತಿ ಆಗುವುದಿಲ್ಲ  ಅನ್ನೋ ವಿಶ್ವಾಸವಿದೆ.  ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ  ಆಕಾಂಕ್ಷಿಯಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನ ನನಗೆ ಬೇಡ.  ಅರ್ಹರಿಗೆ ಅದನ್ನ ಕೊಡಲಿ ಸಚಿವರು ತ್ಯಾಗ ಮಾಡಿ ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಎಂದರು.

ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯಗೆ ಡಿಸಿಎಂ ಹುದ್ದೆ ವಿಚಾರ ಕುರಿತು ಪ್ರತಿಕ್ರಿಯಿಸಿದ ತನ್ವೀರ್ ಸೇಠ್, ಎಲ್ಲರೂ ಎಲ್ಲಾ ಹುದ್ದೆಗೂ ಅರ್ಹರಾಗಿದ್ದಾರೆ. ಹೊಸ ಸರ್ಕಾರದ ರಚನೆ ಜನರ ಅಭಿವೃದ್ದಿಗೆ ಪೂರಕವಾಗಲಿ.   ಹಿಂದೆ  ಹೈಕಮಾಂಡ್ ನಾಯಕರು ಮೌನವಾಗಿದ್ದಿದ್ದು ಸರಿಯಲ್ಲ.  ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.ಕೆಪಿಸಿಸಿ ಅಧ್ಯಕ್ಷ ಸ್ಥಾನ ನನಗೆ ಬೇಡ: ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ- ಶ...

Key words: I am, strong aspirant, ministerial post, MLA, Tanveer Sait