ಸಂಪುಟ ವಿಸರ್ಜನೆ ಹಿನ್ನೆಲೆ: ಸಚಿವರ ಸರ್ಕಾರಿ ವಾಹನಗಳು ವಾಪಸ್

ಬೆಂಗಳೂರು,ಮೇ,29,2026 (www.justkannada.in):  ಮುಖ್ಯಮಂತ್ರಿ ಸ್ಥಾನಕ್ಕೆ  ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದು, ರಾಜೀನಾಮೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಗೀಕರಿಸಿದ್ದಾರೆ.

ಸಿಎಂ ರಾಜೀನಾಮೆ ಅಂಗೀಕಾರವಾಗಿದ್ದು ಈ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟವನ್ನು ವಿಸರ್ಜನೆಯಾಗಿದೆ. ಹೀಗಾಗಿ ಸಚಿವರುಗಳಿಗೆ ಹಂಚಿಕೆಯಾಗಿದ್ದ ಸರ್ಕಾರಿ ವಾಹನಗಳನ್ನು ಇದೀಗ ವಾಪಸ್ ಪಡೆಯಲಾಗಿದ್ದು, ಮಾಜಿ ಸಚಿವರುಗಳು ಖಾಸಗಿ ಕಾರುಗಳಿಗೆ ಶಿಫ್ಟ್ ಆಗಿದ್ದಾರೆ. ಸರ್ಕಾರಿ ನಿವಾಸದ ನಾಮಫಲಕಗಳನ್ನು ಕೂಡ ತೆಗೆಯಲಾಗುತ್ತಿದೆ.

ಈಗಾಗಲೇ ಲೋಕೋಪಯೋಗಿ ಸಚಿವರಾಗಿದ್ದ ಸತೀಶ್ ಜಾರಕಿಹೊಳಿ ಅವರ ಸರ್ಕಾರಿ ನಿವಾಸದ ನಾಮಫಲಕಗಳನ್ನು ತೆಗೆಯಲಾಗಿದೆ. ನಿವಾಸಕ್ಕೆ ಹಾಕಿದ್ದ ನಾಮಫಲಕಕ್ಕೆ ಪೇಪರ್ ಅಂಟಿಸಿ ಮುಚ್ಚಲಾಗಿದೆ.

Key words: Cabinet, dissolution, Ministers,  government vehicles, returned