ನವದೆಹಲಿ,ಮೇ,25,2026 (www.justkannada.in): ವಾಹನ ಸವಾರರಿಗೆ ಕೇಂದ್ರ ಸರ್ಕಾರ ಮತ್ತೆ ಬಿಗ್ ಶಾಕ್ ನೀಡಿದ್ದು ಮತ್ತೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗಿದೆ.
ಪೆಟ್ರೋಲ್ ದರ ಲೀಟರ್ ಗೆ 2.83ರೂ ಡೀಸೆಲ್ ದರ ಲೀಟರ್ ಗೆ 2.82 ರೂ ಹೆಚ್ಚಳವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕೇವಲ 2 ವಾರದ ಅಂತರದಲ್ಲಿ ಒಟ್ಟು 4 ಬಾರಿ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಳ ಆಗಿದೆ. ತೈಲ ಕಂಪನಿಗಳು ಬೆಲೆ ಪರಿಷ್ಕರಣೆ ಮಾಡಿವೆ.
ಈ ವರೆಗೆ ಒಟ್ಟು ಪೆಟ್ರೋಲ್ ಡೀಸೆಲ್ ಲೀಟರ್ ಬೆಲೆಯಲ್ಲಿ 7 ರೂಪಾಯಿಗೂ ಹೆಚ್ಚು ಬೆಲೆ ಏರಕೆ ಕಂಡಿದೆ. ದೆಹಲಿಯಲ್ಲೀಗ ಪೆಟ್ರೋಲ್ ದರ 102.12 ರೂ, ಡೀಸೆಲ್ ಗೆ 95.20 ರೂ ಹೆಚ್ಚಳ ಆಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಗೆ 2.83 ರೂ, ಹಾಗೂ ಡೀಸೆಲ್ ಗೆ 2.81 ರೂ ಹೆಚ್ಚಳ ಆಗಿದೆ. ಹೀಗಾಗಿ ಪೆಟ್ರೋಲ್ ಬೆಲೆ 110.89 ರೂ,ಡೀಸೆಲ್‌ಗೆ 98.80 ರೂ ತಲುಪಿದೆ.
ಅಮೆರಿಕ- ಇರಾನ್ ಯುದ್ದದಿಂದಾಗಿ ಹರ್ಮುಜ್ ಬಿಕ್ಕಟ್ಟಿನಿಂದಾಗಿ ದೇಶದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಸತತವಾಗಿ ಏರಿಕೆಯಾಗುತ್ತಿದೆ.
Key words: Petrol, diesel, prices, hiked, again







