Friday, October 9, 2026

BDA Apartments

Home Front Page ಬಿಜೆಪಿಯ ಅಡಿಯಾಳಾಗಿ ಚು.ಆಯೋಗ ಕೆಲಸ- ಸಚಿವ ಪ್ರಿಯಾಂಕ್ ಖರ್ಗೆ  ವಾಗ್ದಾಳಿ

ಬಿಜೆಪಿಯ ಅಡಿಯಾಳಾಗಿ ಚು.ಆಯೋಗ ಕೆಲಸ- ಸಚಿವ ಪ್ರಿಯಾಂಕ್ ಖರ್ಗೆ  ವಾಗ್ದಾಳಿ

ಬೆಂಗಳೂರು,ಮೇ,23,2026 (www.justkannada.in): ರಾಜ್ಯದಲ್ಲಿ ಎಸ್ ಐಆರ್ ಪ್ರಕ್ರಿಯೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಮತ್ತು ಬಿಜೆಪಿ ವಿರುದ್ದ ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ,  ಎಸ್ಐ ಐಆರ್ ಇದೊಂದು ಆಯುಧವಾಗಿ ಬಳಕೆ ಮಾಡುತ್ತಿದ್ದಾರೆ. ದೇಶದಲ್ಲಿ ತನಿಖಾ ಸಂಸ್ಥೆಗಳಾದ ಸಿಬಿಐ ಇಡಿ ರದ್ದುಪಡಿಸಿದರೇ ಬಿಜೆಪಿ ಒಂದು ಪ್ರಾದೇಶಿಕ ಪಕ್ಷಕ್ಕಿಂತ ಕಡೆಯಾಗಿ ಸೋಲುತ್ತದೆ ಎಂದಿದ್ದಾರೆ.

ಕೇಂದ್ರ ಚುನಾವಣಾ ಆಯೋಗಕ್ಕೆ ನಾವು ಪತ್ರ ಬರೆದಿದ್ದವು ಅಲ್ವಾ? ಚುನಾವಣೆ ಆಯೋಗದವರು ನಮಗೆ ಯಾಕೆ ಉತ್ತರ ಕೊಡಲಿಲ್ಲ?  ಚುನಾವಣಾ ಆಯೋಗದವರು ಬಿಜೆಪಿಯ ಅಡಿಯಾಳಾಗಿ ಕೆಲಸ ಮಾಡುತ್ತಿದ್ದಾರೆ. ಜ್ಞಾನೇಶ್ ಕುಮಾರ್ ಗಣವೇಷಧಾರಿ ಆಗಿ ಹೋಗೋದು ಬಾಕಿ ಇದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.ಬಿಜೆಪಿಯ ಅಡಿಯಾಳಾಗಿ ಚು.ಆಯೋಗ ಕೆಲಸ- ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ jk02_new jk...

Key words: Election Commission, working, pawn, BJP, Minister, Priyank Kharge