ಶಾಲೆಗಳಲ್ಲಿ ಕೇಸರಿ ಶಾಲು ಅಭಿಯಾನ ವಿಚಾರ: ಬಿಜೆಪಿ ವಿರುದ್ದ ಸಚಿವ ಮಧು ಬಂಗಾರಪ್ಪ ವಾಗ್ದಾಳಿ

ಶಿವಮೊಗ್ಗ,ಮೇ,22,2026 (www.justkannada.in): ಶಾಲೆಗಳಲ್ಲಿ ಕೇಸರಿ ಶಾಲು ಅಭಿಯಾನಕ್ಕೆ ನಿರ್ಧಾರ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಶಾಲೆಗಳಲ್ಲಿ ಕೇಸರಿ ಶಾಲು ಅಭಿಯಾನಕ್ಕೆ ನಿರ್ಧಾರ,  ಈ ರೀತಿ ಹೇಳಲು ಬಿಜೆಪಿಯವರಿಗೆ ನಾಚಿಕೆಯಾಗಬೇಕು . ಇವೆಲ್ಲವೂ ಕೂಡ ರಬ್ಬೀಶ್ ಕೆಲಸವಾಗಿದೆ. ಬಿಜೆಪಿಯವರು ಮಕ್ಕಳನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ನೀಟ್ ನಲ್ಲಿ 25 ಲಕ್ಷ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದ್ದಾರೆ ಎಂದರು.

ಧರ್ಮೇಂದ್ರ ಪ್ರಧಾನ್  ಆ ಹೆಸರು ಇಟ್ಟುಕೊಳ್ಳಲು ನಾಲಾಯಕ್ ಯಾರು ಹೊಣೆಗಾರರೋ ಅವರ ತಲೆದಂಡವಾಗಬೇಕಿತ್ತು ಕೇಂದ್ರ ಶಿಕ್ಷಣ ಸಚಿವರು ಕಾರು ಹತ್ತಿ ಹೋಗಿ ನಾಪತ್ತೆಯಾಗಿದ್ದಾರೆ.  5 ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಈ ದುರಂತದ ಬಗ್ಗೆ ಬಿಜೆಪಿಯವರು ಯಾಕೆ ಮಾತನಾಡಲ್ಲ. ಎಲ್ಲಾ ಧರ್ಮದವರನ್ನು ಕಾಪಡುವ ಕೆಲಸ ನಮ್ಮದು ಎಂದು ಸಚಿವ ಮಧು ಬಂಗಾರಪ್ಪ ಕಿಡಿಕಾರಿದರು.

Key words: Minister, Madhu Bangarappa, BJP, saffron shawl, campaign