ಹುಬ್ಬಳ್ಳಿ,ಮೇ,23,2026 (www.justkannada.in): ಕಾಂಗ್ರೆಸ್ ಮತಾಂಧರ ಮೇಲಿನ ಕೇಸ್ ಗಳನ್ನು ಖುಲಾಸೆ ಮಾಡುತ್ತಿದೆ. ಈ ಮೂಲಕ ಕಾಂಗ್ರೆಸ್ ತನ್ನ ಮತಾಂಧ ತುಷ್ಠೀಕರಣದಿಂದ ಅಧೋಗತಿಗೆ ತಲುಪಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗುಡುಗಿದ್ದಾರೆ.
ರಾಜ್ಯ ಸರ್ಕಾರ 52 ಕ್ರಿಮಿನಲ್ ಕೇಸ್ ಗಳನ್ನು ಹಿಂಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯ ಸರ್ಕಾರ ಮುಸ್ಲೀಮರ ತುಷ್ಠಿಕರಣದ ಪರಾಕಷ್ಠೆ ತಲುಪಿದೆ. ತುಷ್ಟೀಕರಣದಿಂದ ದೇಶದಲ್ಲಿ ಕಾಂಗ್ರೆಸ್ ಅಧೋಗತಿಗೆ ತಲುಪಿದೆ ಹಳೇ ಹುಬ್ಬಳ್ಳಿ ಘಟನೆ, ಗಲಭೆ ಹಾಗೂ ಹಲ್ಲೆ ವಿಚಾರ ಸೇರಿದಂತೆ ಹಲವು ಪ್ರಕರಣಗಳನ್ನು ಕೈಬಿಡುವ ಪ್ರಯತ್ನ ಸರ್ಕಾರ ಮಾಡಿತು. ಆದರ ಹೋರಾಟದ ನಂತರ ಅವುಗಳನ್ನ ಕೈಬಿಟ್ಟರು. ಕಾಂಗ್ರೆಸ್ ತನ್ನ ಮತಾಂಧ ತುಷ್ಠೀಕರಣ ನೀತಿಯನ್ನು ಕೈಬಿಡಬೇಕು ಎಂದರು.
ಕಾಂಗ್ರೆಸ್ ಗೆ ಎಸ್ ಐಆರ್ ವಿಚಾರದಲ್ಲಿ ಭಯ ಹುಟ್ಟಿದೆ. ಕೇರಳದಲ್ಲಿ ಎಸ್ ಐಆರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನಲ್ಲಿ ಎಸ್ಐಆರ್ ಬಗ್ಗೆ ಯಾರದ್ದೂ ತೊಂದರೆ ಇಲ್ಲ. ಪಕ್ಷವು ತನ್ನ ಬುದ್ದಿಯಿಂದಲೇ ದಿವಾಳಿಯಾಗಿದೆ ಎಂದು ಪ್ರಹ್ಲಾದ್ ಜೋಶಿ ಕಿಡಿಕಾರಿದರು.
Key words: Congress, fanatical appeasement, Union Minister, Pralhad Joshi







