Friday, October 9, 2026

BDA Apartments

Home Crime ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ: ಕೇರಳದಲ್ಲಿ ಆರೋಪಿಯ ಬಂಧನ

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ: ಕೇರಳದಲ್ಲಿ ಆರೋಪಿಯ ಬಂಧನ

ಬೆಂಗಳೂರು,ಮೇ,23,2026 (www.justkannada.in): ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಬೆಂಗಳೂರಿನ ಪೊಲೀಸರು ಕೇರಳದಲ್ಲಿ ಆರೋಪಿಯನ್ನ ಬಂಧಿಸಿ ಕರೆತಂದಿದ್ದಾರೆ ಎನ್ನಲಾಗಿದೆ.

ಹೈನಾಸ್  ಬಂಧಿತ ಆರೋಪಿ. ಬೆಂಗಳೂರಿನಲ್ಲಿ  ಯುವತಿ ಮೇಲೆ ಅತ್ಯಾಚಾರ ಆರೋಪ ಕೇಳಿ ಬಂದಿತ್ತು. ಮಡಿವಾಳ ಪೊಲೀಸ್  ಠಾಣಾ ವ್ಯಾಪ್ತಿಯಲ್ಲಿ ಘಟನೆ  ನಡೆದಿತ್ತು. ಕೇರಳ ಮೂಲದ ವಿದ್ಯಾರ್ಥಿನಿ ಮೇಲೆ ಆರೋಪಿ ಹೈನಾಸ್ ಅತ್ಯಾಚಾರವೆಸಗಿದ್ದಎಂಬ ಆರೋಪ ಕೇಳಿ ಬಂದಿತ್ತು.

ಈ ಸಂಬಂಧ ಮಡಿವಾಳ ಪೊಲೀಸ್ ಠಾಣೆಗೆ ಸಂತ್ರಸ್ತೆ ದೂರು ನೀಡಿದ್ದರು. ಎಫ್ ಐಆರ್ ದಾಲಾಗಿತ್ತು. ತನ್ನ ಸ್ಮೇಹಿತರ ಜೊತೆ ಪಾರ್ಟಿ ಮಾಡುವಾಗ ಕೃತ್ಯವೆಸಗಲಾಗಿತ್ತು.  ಸ್ನೇಹಿತರು ಊಟ ತರಲು ಹೋಗಿದ್ದಾಗ ಆರೋಪಿ ಅತ್ಯಾಚಾರವೆಸಗಿ ಬಳಿಕ ಕೇರಳಕ್ಕೆ ಪರಾರಿಯಾಗಿದ್ದ ಎನ್ನಲಾಗಿದೆ.

ನಿನ್ನೆ ಪೊಲೀಸರು ಆರೋಪಿ ಹೈನಾಸ್ ನನ್ನು ಬಂಧಿಸಿ ಕರೆತಂದಿದ್ದಾರೆ. ಮೇ 11 ರಂದು ಆರೋಪಿ ಕೃತ್ಯವೆಸಗಿದ್ದ ಎನ್ನಲಾಗಿದೆ.ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ: ಕೇರಳದಲ್ಲಿ ಆರೋಪಿಯ ಬಂಧನ jk02_new jk02 new

Key words: Student, accused, rape, Accused, arrested, Kerala