Monday, October 5, 2026

BDA Apartments

ನಾಡು ಕಂಡ ಶ್ರೇಷ್ಠ ಮುತ್ಸದ್ಧಿ ರಾಜಕಾರಣಿ ಎಸ್.ಎಂ ಕೃಷ್ಣ: ಅವರ ಆಡಳಿತ ವೈಖರಿ ರ...
Home Front Page ಸಚಿವ ಮಧು ಬಂಗಾರಪ್ಪಗೆ ಬಜರಂಗದಳದ ಕಾರ್ಯಕರ್ತರು ಘೇರಾವ್: ಪೊಲೀಸರ ವಶಕ್ಕೆ

ಸಚಿವ ಮಧು ಬಂಗಾರಪ್ಪಗೆ ಬಜರಂಗದಳದ ಕಾರ್ಯಕರ್ತರು ಘೇರಾವ್: ಪೊಲೀಸರ ವಶಕ್ಕೆ

ಶಿವಮೊಗ್ಗ,ಮೇ,22,2026 (www.justkannada.in):  ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಗೆ ಅವಕಾಶ ಕೊಟ್ಟು ಕೇಸರಿ ಶಾಲಿಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ದ ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ.

ಈ ಅಂಗವಾಗಿ ಇಂದು ಬಜರಂಗ ದಳದ ಕಾರ್ಯಕರ್ತರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರಿಗೆ ಘೇರಾವ್ ಹಾಕಿ ಧಿಕ್ಕಾರ ಕೂಗಿದ್ದಾರೆ.

ಇಂದು ಶಿವಮೊಗ್ಗದಲ್ಲಿ ಕೆಡಿಪಿ ಸಭೆಗೆ ಆಗಮಿಸಿದಾಗ ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಬಜರಂಗದಳದ ಕಾರ್ಯಕರ್ತರು ಘೇರಾವ್ ಹಾಕಿ ಸರ್ಕಾರಕ್ಕೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮುತ್ತಿಗೆ ಹಾಕಲು ಹೊರಟ 30ಕ್ಕೂ ಹೆಚ್ಚು ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಚಿವ ಮಧು ಬಂಗಾರಪ್ಪಗೆ ಬಜರಂಗದಳದ ಕಾರ್ಯಕರ್ತರು ಘೇರಾವ್: ಪೊಲೀಸರ ವಶಕ್ಕೆ jk02_n...

Key words: BajrangDal, activists, Minister, Madhu Bangarappa