Thursday, October 8, 2026

BDA Apartments

Home Front Page ಮೇ 27 ರಂದು 30 ಶಾಸಕರು ದೆಹಲಿಗೆ-ಬೇಳೂರು ಗೋಪಾಲಕೃಷ್ಣ

ಮೇ 27 ರಂದು 30 ಶಾಸಕರು ದೆಹಲಿಗೆ-ಬೇಳೂರು ಗೋಪಾಲಕೃಷ್ಣ

ಶಿವಮೊಗ್ಗ,ಮೇ,27,2026 (www.justkannada.in): ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಿ ಮೂರು ವರ್ಷ ಪೂರೈಸಿದ್ದು ಇದೀಗ ಸಚಿವ ಸಂಪುಟ ಪುನಾರಚನೆ ಕೂಗು ಕೇಳಿ ಬರುತ್ತಿದೆ. ಈ ಸಂಬಂಧ ಶಾಸಕ ಬೇಳೂರು ಗೋಪಾಲಕೃಷ್ಣ ಪ್ರತಿಕ್ರಿಯಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ, ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ.  ಮೇ 27 ರಂದು ಕಾಂಗ್ರೆಸ್ 30 ಶಾಸಕರು ದೆಹಲಿಗೆ ಹೋಗುತ್ತೇವೆ.  ಹೈಕಮಾಂಡ್ ಭೇಟಿ ಆಗಿ ನಮ್ಮ ಹಕ್ಕು ಮಂಡನೆ ಮಾಡುತ್ತೇವೆ ಎಂದರು.

ಮೂರು ವರ್ಷ ಬೇರೆಯವರು ಅಧಿಕಾರ ಅನುಭವಿಸಿದ್ದಾರೆ. ಈಗ ನಮಗೆ ಅವಕಾಶ ಮಾಡಿಕೊಡಬೇಕು  ಸಿಎಂ ಬದಲಾವಣೆ ಹೈಕಮಾಂಡ್ ಗೆ ಬಿಟ್ಟ ವಿಚಾರ  ಎಂದು ಬೇಳೂರು ಗೋಪಾಲಕೃಷ್ಣ ತಿಳಿಸಿದರು.ಮೇ 27 ರಂದು 30 ಶಾಸಕರು ದೆಹಲಿಗೆ-ಬೇಳೂರು ಗೋಪಾಲಕೃಷ್ಣ jk02_new jk02 new

Key words: 30 MLAs, Delhi, May 27, Belur Gopalakrishna