ನವದೆಹಲಿ,ಮೇ,21,2026 (www.justkannada.in): ಸಾಮಾಜಿಕ ಜಾಲತಾಣ X (ಹಳೆಯ ಟ್ವಿಟ್ಟರ್) ನಲ್ಲಿ ಭಾರೀ ವೈರಲ್ ಆಗಿದ್ದ “Cockroach Janta Party (CJP)” ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ. ಖಾತೆಯ ಸ್ಥಾಪಕ ಅಭಿಜೀತ್ ದೀಪ್ಕೆ ಅವರು, “Account has been withheld in India” ಎಂದು ಪೋಸ್ಟ್ ಮಾಡಿ ಮಾಹಿತಿ ನೀಡಿದ್ದಾರೆ.
ಈ ನಿರ್ಬಂಧದ ಬಳಿಕ ಭಾರತದಲ್ಲಿರುವ ಬಳಕೆದಾರರಿಗೆ ಆ ಖಾತೆ ಕಾಣಿಸದಂತಾಗಿದೆ. ಆದರೆ ಇತರೆ ದೇಶಗಳಲ್ಲಿ ಖಾತೆ ಲಭ್ಯವಿರುವ ಸಾಧ್ಯತೆ ಇದೆ. ಸರ್ಕಾರ ಅಥವಾ ಕಾನೂನು ಸಂಸ್ಥೆಗಳ ಮನವಿಯ ಮೇರೆಗೆ X ವೇದಿಕೆ ಇಂತಹ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿದುಬಂದಿದೆ.
“Cockroach Janta Party” ಯುವಕರ ಸಮಸ್ಯೆಗಳು, ನಿರುದ್ಯೋಗ, ರಾಜಕೀಯ ವ್ಯವಸ್ಥೆ ಹಾಗೂ ಸಾಮಾಜಿಕ ವಿಚಾರಗಳನ್ನು ವ್ಯಂಗ್ಯ ಮತ್ತು ಮೀಮ್ ಗಳ ಮೂಲಕ ಪ್ರಸ್ತಾಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಜನಪ್ರಿಯತೆ ಗಳಿಸಿತ್ತು. ಕೆಲವೇ ದಿನಗಳಲ್ಲಿ ಲಕ್ಷಾಂತರ ಫಾಲೋವರ್ಸ್ ಗಳಿಸಿದ್ದ ಈ ಖಾತೆ ಕುರಿತು ದೇಶಾದ್ಯಂತ ಚರ್ಚೆ ನಡೆಯುತ್ತಿತ್ತು.
ಆದರೆ ಖಾತೆ ನಿರ್ಬಂಧಕ್ಕೆ ನಿಖರ ಕಾರಣವನ್ನು ಸರ್ಕಾರ ಅಥವಾ X ಸಂಸ್ಥೆ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಡಿಜಿಟಲ್ ಸೆನ್ಸಾರ್ ಕುರಿತು ಚರ್ಚೆಗಳು ಜೋರಾಗಿವೆ.
Key words: Cockroach, X account, Restriction, India







