ರಾಯ್ ಬರೇಲಿ,ಮೇ,20,2026 (www.justkannada.in): ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಬಿಜೆಪಿ, ಆರ್ ಎಸ್ ಎಸ್ ದೇಶದ್ರೋಹಿಗಳು. ರಾಷ್ಟ್ರದ ಹಿತಾಸಕ್ತಿಗೆ ವಿರುದ್ದವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಲೋಕಸಭೆ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಮೋದಿ, ಅಮಿತ್ ಶಾ, ಬಿಜೆಪಿ ಒಟ್ಟಾಗಿ ದೇಶವನ್ನ ಮಾರಾಟ ಮಾಡಲು ಕೆಲಸ ಮಾಡಿದ್ದೀರಿ. ಬಿಜೆಪಿ, ಆರ್ ಎಸ್ ಸ್ ಸಂವಿಧಾನದ ಮೇಲೆ ದಾಳೀ ಮಾಡಿದೆ. ಪಂಚ ರಾಜ್ಯಗಳ ಚುನಾವಣೆ ಮೊದಲು ಇಂಧನ ಕೊರತೆ ಇಲ್ಲ ಅಂದಿದ್ರಿ. ಪೆಟ್ರೋಲ್ ಡೀಸೆಲ್ ದರ ಹೆಚ್ಚಳವಾಗಲ್ಲ ಎಂದಿದ್ರಿ ಆದರೆ ಈಗ ಪೆಟ್ರೋಲ್, ಡೀಸೆಲ್ ದರ ಹೆಚ್ಚಳವಾಗುತ್ತಿದೆ ಎಂದು ಕಿಡಿಕಾರಿದರು.
ಅಂಬಾನಿ ಭಾರತದಿಂದ ವಿದೇಶಗಳಿಗೆ ಪೆಟ್ರೋಲ್ ರಪ್ತು ಮಾಡುತ್ತಾರೆ. ಅಂಬಾನಿ ರಷ್ಯಾದಿಂದ ಪೆಟ್ರೋಲ್ ಖರೀದಿಸಿ ಬೇರೆಡೆ ಮಾರಾಟ ಮಾಡುತ್ತಾರೆ. ಆ ಹಣದಿಂದ ಮೋದಿಗೆ ಹಣಕಾಸು ಒದಗಿಸುತ್ತಾರೆ ಮೋದಿ ಭಾರತದ ಆರ್ಥಿಕ ವ್ಯವಸ್ಥೆಯನ್ನ ಹಾಳು ಮಾಡಿದ್ದಾರೆ. ಅಂಬಾನಿ, ಅದಾನಿ, ಯುಎಸ್ ಗೆ ಹಸ್ತಾಂತರ ಮಾಡಿದ್ದಾರೆ . ಆರ್ಥಿಕ ವ್ಯವಸ್ಥೆಯನ್ನ ಮಾರಾಟ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಹರಿಹಾಯ್ದರು.
Key words: Modi, Amit Shah, traitors, Rahul Gandhi







