Sunday, August 2, 2026

BDA Apartments

Home Front Page ನಾನು ಕಾವೇರಿ ಕಣಿವೆ ರೈತನ ಮಗ, ರಾಜ್ಯದ ಹಿತಾಸಕ್ತಿ ಬಲಿಕೊಡುವ ಪ್ರಶ್ನೆಯೇ ಇಲ್ಲ

ನಾನು ಕಾವೇರಿ ಕಣಿವೆ ರೈತನ ಮಗ, ರಾಜ್ಯದ ಹಿತಾಸಕ್ತಿ ಬಲಿಕೊಡುವ ಪ್ರಶ್ನೆಯೇ ಇಲ್ಲ

Chief Minister D.K. Shivakumar said that the inflow into the reservoirs in the Cauvery basin is currently around 67,000–68,000 cusecs, and water is being released into canals to meet drinking water requirements and to fill tanks and lakes. Addressing the media after the all-party meeting on the Cauvery water issue at the Chief Minister's official residence, Krishna, on Sunday, Shivakumar said: "The entire state was keenly watching today's all-party meeting. I assumed the responsibility of Chief Minister two months ago. I was born in the Cauvery basin and am the son of a farmer. My government and I are fully committed to protecting the interests of the people of Karnataka on the Cauvery issue. There should be no doubt about that. On every previous occasion, the state's interests have been safeguarded, and we will continue to do so."

 

ಬೆಂಗಳೂರು, ಆ. 02: “ಕಾವೇರಿ ಭಾಗದ ಅಣೆಕಟ್ಟುಗಳಲ್ಲಿ ಒಳ ಹರಿವಿನ ಪ್ರಮಾಣ 67-68 ಸಾವಿರ ಕ್ಯೂಸೆಕ್ಸ್ ನಷ್ಟಿದ್ದು, ಕುಡಿಯುವ ಉದ್ದೇಶಕ್ಕೆ ಹಾಗೂ ಕೆರೆಗಳಿಗೆ ನೀರು ತುಂಬಿಸಲು ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ಕಾವೇರಿ ನದಿ ನೀರಿನ ವಿಚಾರವಾಗಿ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಭಾನುವಾರ ಸರ್ವಪಕ್ಷಗಳ ಸಭೆ ಬಳಿಕ ಶಿವಕುಮಾರ್ ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

“ಇಂದಿನ ಸರ್ವಪಕ್ಷ ಸಭೆ ಬಗ್ಗೆ ಇಡೀ ರಾಜ್ಯ ಕುತೂಹಲದಿಂದ ನೋಡುತ್ತಿತ್ತು.  ನಾನು 2 ತಿಂಗಳ ಹಿಂದೆ ಸಿಎಂ ಜವಾಬ್ದಾರಿ ವಹಿಸಿದ್ದೇನೆ. ನಾನು ಕಾವೇರಿ ಕಣಿವೆಯಲ್ಲಿ ಹುಟ್ಟಿದ ರೈತನ ಮಗನಾಗಿದ್ದೇನೆ. ಕಾವೇರಿ ವಿಚಾರದಲ್ಲಿ ರಾಜ್ಯದ ಜನರ ರಕ್ಷಣೆಗೆ ನಾನು ಹಾಗೂ ನಮ್ಮ ಸರ್ಕಾರ ಬದ್ಧವಾಗಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಈ ಹಿಂದೆ ಎಲ್ಲಾ ಸಂದರ್ಭದಲ್ಲಿ ರಾಜ್ಯದ ಹಿತ ಕಾಪಾಡಲಾಗಿತ್ತು” ಎಂದರು.

“ಬಂಗಾರಪ್ಪ ಅವರ ಕಾಲದಿಂದ ಇಲ್ಲಿಯವರೆಗೆ ಯಾರಿಗೂ ಅನ್ಯಾಯ ಆಗದ ರೀತಿಯಲ್ಲಿ ನಮ್ಮ ಸರ್ಕಾರ ಆಡಳಿತ ಮಾಡಿಕೊಂಡು ಬಂದಿದೆ. ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಆಡಳಿತ ಅವಧಿಯಲ್ಲೂ ಅವರು ಅವರದೇ ಆದ ಪ್ರಯತ್ನ ಮಾಡಿದ್ದಾರೆ” ಎಂದರು.

35% ರಷ್ಟು ಮಾತ್ರ ಮಳೆಯಾಗಿದೆ:

“ಮಳೆ ಬಾರದೆ ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದೆ. ಕೇವಲ 30-35%ರಷ್ಟು ಮಾತ್ರ ಮಳೆಯಾಗಿದೆ. ನಾವು ಮಾರ್ಗದರ್ಶನ ನೀಡುವವರೆಗೆ ಬೆಳೆ ಹಾಕಿಕೊಳ್ಳಬೇಡಿ ಎಂದು ನಾವು ರೈತರಿಗೆ ಮನವಿ ಮಾಡಿದ್ದೇವೆ. ತಮಿಳುನಾಡು 9 ಟಿಎಂಸಿ ನೀರು ನೀಡಬೇಕು ಎಂದು ಮನವಿ ಮಾಡಿತ್ತು. ಆದರೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ತಮಿಳುನಾಡಿಗೆ 15 ದಿನಗಳ ಕಾಲ ನಿತ್ಯ 3,500 ಕ್ಯೂಸೆಕ್ಸ್ ನೀರು ಹರಿಸಬೇಕು ಎಂದು ಆದೇಶ ನೀಡಿದೆ” ಎಂದು ತಿಳಿಸಿದರು.

“ಈ ಆದೇಶ ಬಂದಾಗ ನಮ್ಮ ಅಣೆಕಟ್ಟುಗಳು ತುಂಬಿರಲಿಲ್ಲ. ಮಳೆಯೂ ಇರಲಿಲ್ಲ. ರಾಜ್ಯದ ಜನರ ಪ್ರಾರ್ಥನೆಯಂತೆ ಮಳೆಯಾಗಿದ್ದು, ನಮ್ಮ ಪರಿಸ್ಥಿತಿ ಸ್ವಲ್ಪ ಮಟ್ಟಿನ ಸುಧಾರಣೆ ಕಂಡಿದೆ. ಭಾನುವಾರ ಮಧ್ಯಾಹ್ನದವರೆಗೆ ನನಗೆ ಬಂದಿರುವ ಮಾಹಿತಿ ಪ್ರಕಾರ, ಕಬಿನಿಯಲ್ಲಿ 24,000, ಕೆಆರ್ ಎಸ್ ನಲ್ಲಿ 22,000, ಹೇಮಾವತಿಯಲ್ಲಿ 11,884, ಹಾರಂಗಿಯಲ್ಲಿ 10,430 ಕ್ಯೂಸೆಕ್ ನೀರು ಒಳ ಹರಿವು ಇದೆ. ಎಷ್ಟೇ ಕಷ್ಟದ ಪರಿಸ್ಥಿತಿ ಬಂದರೂ ಕುಡಿಯುವ ನೀರಿನ ಭದ್ರತೆಗೆ ಜಲಾಶಯಗಳಲ್ಲಿ 40 ಟಿಎಂಸಿ ನೀರು ಉಳಿಸಿಕೊಳ್ಳಬೇಕು. ಅದರಲ್ಲಿ 36 ಟಿಎಂಸಿ ಕುಡಿಯುವ ಉದ್ದೇಶಕ್ಕೆ ಹಾಗೂ 4 ಟಿಎಂಸಿ ಆವಿಯಾಗುತ್ತದೆ” ಎಂದು ವಿವರಿಸಿದರು.

“ಇಂದಿನ ಸಭೆಗೆ ಬಂದಿದ್ದ ಮಾಜಿ ಮುಖ್ಯಮಂತ್ರಿಗಳು, ಕೇಂದ್ರದ ಸಚಿವರು, ಸಂಸದರು ರಾಜ್ಯದ ಹಿತಕ್ಕಾಗಿ ಅನೇಕ ವಿಭಿನ್ನ ಸಲಹೆಗಳನ್ನು ನೀಡಿದ್ದಾರೆ. ಸಭೆಗೆ ಆಗಮಿಸಿದ್ದ ಎಲ್ಲಾ ನಾಯಕರಿಗೆ ಸರ್ಕಾರದ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ. ಮಾಜಿ ಮುಖ್ಯಮಂತ್ರಿಗಳು, ಮಾಜಿ ನೀರಾವರಿ ಸಚಿವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ನಮ್ಮ ಕಾನೂನು ತಜ್ಞರು ಸಭೆಯಲ್ಲಿ ಭಾಗಿಯಾಗಿ ಪರಿಸ್ಥಿತಿ ಹಾಗೂ ಮುಂದಿನ ತೀರ್ಮಾನದ ಬಗ್ಗೆ ಮಾಹಿತಿ ನೀಡಿದ್ದಾರೆ” .

ಕಾನೂನು ತಜ್ಞರ ಸಲಹೆ ಮೇರೆಗೆ ಸುಪ್ರೀಂ ಕೋರ್ಟ್ ಮೇಲ್ಮನವಿ ಬಗ್ಗೆ ತೀರ್ಮಾನ:

“ಸಂಕಟ ಸೂತ್ರದ ವಿಚಾರದಲ್ಲಿ ಕಾನೂನನ್ನು ಗಮನದಲ್ಲಿಟ್ಟು ಕೊಂಡು ಕಾನೂನು ತಜ್ಞರೊಂದಿಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು. ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವ ವಿಚಾರದಲ್ಲೂ ಕಾನೂನು ತಜ್ಞರ ಸಲಹೆ ಗಮನದಲ್ಲಿಟ್ಟುಕೊಂಡು ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ನಾವು ಆರಂಭಿಕ ಹಂತದಲ್ಲಿದ್ದು, ಮುಂಬರುವ ಜನವರಿ ತಿಂಗಳವರೆಗೂ ಪ್ರತಿ 15 ದಿನಕ್ಕೊಮ್ಮೆ ಕಾವೇರಿ ಸಮಿತಿ ಹಾಗೂ ಪ್ರಾಧಿಕಾರ ಸಭೆ ಮಾಡಲಿದ್ದಾರೆ. ಹೀಗಾಗಿ ನಾವು ಎಚ್ಚರ ವಹಿಸಬೇಕು” ಎಂದರು.

Key words: I Am the Son of a Farmer, from the Cauvery Basin, There Is No Question of Compromising the State’s Interests, Chief Minister D.K. Shivakumar

SUMMARY:

“I Am the Son of a Farmer from the Cauvery Basin; There Is No Question of Compromising the State’s Interests”

Bengaluru, Aug. 2: Chief Minister D.K. Shivakumar said that the inflow into the reservoirs in the Cauvery basin is currently around 67,000–68,000 cusecs, and water is being released into canals to meet drinking water requirements and to fill tanks and lakes.

Addressing the media after the all-party meeting on the Cauvery water issue at the Chief Minister’s official residence, Krishna, on Sunday, Shivakumar said:

“The entire state was keenly watching today’s all-party meeting. I assumed the responsibility of Chief Minister two months ago. I was born in the Cauvery basin and am the son of a farmer. My government and I are fully committed to protecting the interests of the people of Karnataka on the Cauvery issue. There should be no doubt about that. On every previous occasion, the state’s interests have been safeguarded, and we will continue to do so.”