Friday, October 2, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಕಾದಾಟದ ವೇಳೆ ಗಾಯಗೊಂಡಿದ್ದ ‘ಮಾರ್ತಾಂಡ’ ಆನೆ ಚಿಕಿತ್ಸೆ ಫಲಿಸದೆ ಸಾವು

ಕಾದಾಟದ ವೇಳೆ ಗಾಯಗೊಂಡಿದ್ದ ‘ಮಾರ್ತಾಂಡ’ ಆನೆ ಚಿಕಿತ್ಸೆ ಫಲಿಸದೆ ಸಾವು

ಕೊಡಗು,ಮೇ,19,2026(www.justkannada.in):  ನಿನ್ನೆ ಕೊಡಗು ಜಿಲ್ಲೆ ಕುಶಾಲನಗರದ ದುಬಾರೆ ಆನೆ ಶಿಬಿರದಲ್ಲಿ ಸ್ನಾನ ಮಾಡುವ ವೇಳೆ ಕಂಜನ್ ಆನೆ ದಾಳಿಯಿಂದ ಗಾಯಗೊಂಡಿದ್ದ ಮಾರ್ತಾಂಡ ಆನೆ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದೆ.

ನಿನ್ನೆ ಸ್ನಾನ ಮಾಡುವ ವೇಳೆ ಕಂಜನ್ ಆನೆ ಮತ್ತು ಮಾರ್ತಾಂಡ ಆನೆ ನಡುವೆ ಕಾದಾಟ ನಡೆಸಿದ್ದವು. ಈ ವೇಳೆ ಆನೆಗಳ ಅಡಿಗೆ ಸಿಲುಕಿದ್ದ ಚೆನ್ನೈ ಮೂಲದ ಪ್ರವಾಸಿ ಮಹಿಳೆ ಸಾವನ್ನಪ್ಪಿದ್ದರು.  ಹಾಗೆಯೇ ಕಂಜನ್ ಆನೆ ದಾಳಿಯಿಂದ  ಮರ್ತಾಂಡ ಆನೆಯ ಹೊಟ್ಟೆ ಕಿವಿ ಹಿಂಭಾಗಕ್ಕೆ ಕಾಲಿಗೆ ಗಾಯವಾಗಿತ್ತು.

ನಂತರ ದುಬಾರೆ ಶಿಬಿರದಲ್ಲಿ ಮಾರ್ತಾಂಡಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೇ ಮಾರ್ತಾಂಡ ಆನೆ ಮೃತಪಟ್ಟಿದೆ.ಕಾದಾಟದ ವೇಳೆ ಗಾಯಗೊಂಡಿದ್ದ ‘ಮಾರ್ತಾಂಡ’ ಆನೆ ಚಿಕಿತ್ಸೆ ಫಲಿಸದೆ ಸಾವು jk02_new jk02...

Key words:    Martanda elephant, fight, dies, Dubare Camp