Tuesday, August 18, 2026

BDA Apartments

Home Front Page ಸಾರಿಗೆ ನೌಕರರ ಮುಷ್ಕರ: ಬೆಂಬಲ ವಾಪಸ್ ಪಡೆದ KSRTC ನೌಕರರ ಸಂಘ

ಸಾರಿಗೆ ನೌಕರರ ಮುಷ್ಕರ: ಬೆಂಬಲ ವಾಪಸ್ ಪಡೆದ KSRTC ನೌಕರರ ಸಂಘ

ಬೆಂಗಳೂರು,ಮೇ,19,2026 (www.justkannada.in):  ಶೇ.25ರಷ್ಟು ವೇತನ ಪರಿಷ್ಕರಣೆ ಸೇರಿ ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಾಳೆ ಕರೆ ನೀಡಲಾಗಿರುವ ಸಾರಿಗೆ ನೌಕರರ ಮುಷ್ಕರಕ್ಕೆ ಕೆಎಸ್ ಆರ್ ಟಿಸಿ ನೌಕರರ ಸಂಘವು ನೀಡಿದ್ದ ಬೆಂಬಲವನ್ನ ವಾಪಸ್ ಪಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ನಾಳೆ ಸಾರಿಗೆ ನೌಕರರ ಮುಷ್ಕರಕ್ಕೆ ಕರೆ ನೀಡಲಾಗಿತ್ತು. ಮುಷ್ಕರದ ಹೊತ್ತಿನಲ್ಲಿ ಜಂ ಜಂಟಿ ಕ್ರಿಯಾ ಸಮಿತಿಯಲ್ಲಿ ಭಿನ್ನಮತ ಉಂಟಾಗಿದ್ದು, ಇದೀಗ ಬಂದ್ ಬೆಂಬಲ ನೀಡದೇ ಇರುವುದಕ್ಕೆ  ಜಗದೀಶ್ ನೇತೃತ್ವದ ಕೆಎಸ್ ಆರ್ ಟಿಸಿ ನೌಕರರ ಸಂಘ ನಿರ್ಧರಿಸಿದೆ.

ಜಂಟಿ ಕ್ರಿಯಾಸಮಿತಿಗೆ  ಕಳೆದ 4 ವರ್ಷದಿಂದ ಕೆಎಸ್ ಆರ್ ಟಿಸಿ ನೌಕರರ ಸಂಘ ಬೆಂಬಲವಾಗಿ ನಿಂತಿತ್ತು. ಕೆಎಸ್ ಆರ್ ಟಿಸಿ ಎಂಡಿಗೆ ಪತ್ರ ಬರೆದು ನಾಳಿನ ಮುಷ್ಕರಕ್ಕೆ  ಬೆಂಬಲ ಕೊಡಲಾಗಿತ್ತು. ಇದೀಗ ಜಗದೀಶ್ ನೇತೃತ್ವದ ಕೆಎಸ್ ಆರ್ ಟಿಸಿ ನೌಕರರ ಸಂಘ ಬೆಂಬಲ ವಾಪಸ್ ಪಡೆದಿದೆ ಎನ್ನಲಾಗಿದೆ.

Key words: Transport employees, strike, tomorrow, KSRTC, employees, association