Thursday, October 1, 2026

BDA Apartments

Home Front Page ಸಾರಿಗೆ ನೌಕರರ ಜೊತೆ ಸರ್ಕಾರದ ಸಂಧಾನ ಸಭೆ ವಿಫಲ: ಮುಷ್ಕರ ಫಿಕ್ಸ್

ಸಾರಿಗೆ ನೌಕರರ ಜೊತೆ ಸರ್ಕಾರದ ಸಂಧಾನ ಸಭೆ ವಿಫಲ: ಮುಷ್ಕರ ಫಿಕ್ಸ್

ಬೆಂಗಳೂರು,ಮೇ,18,2026 (www.justkannada.in): ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮೇ 20 ರಂದು ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿರುವ ಸಾರಿಗೆ ನೌಕರರ ಜೊತೆ ಇಂದು ರಾಜ್ಯ ಸರ್ಕಾರ ನಡೆಸಿದ ಸಂಧಾನ ಸಭೆ ವಿಫಲವಾಗಿದೆ.

ಕಾರ್ಮಿಕ  ಇಲಾಖೆ ಕಚೇರಿಯಲ್ಲಿ ಕಾರ್ಮಿಕ ಇಲಾಖೇ ಆಯುಕ್ತ ದಿನೇಶ್ ಕುಮಾರ್ ನೇತೃತ್ವದಲ್ಲಿ ಸಾರಿಗೆ ನೌಕರರ ಮುಖಂಡರ ಜೊತೆ ಸಂಧಾನ ಸಭೆ ನಡೆಯಿತು. ಆದರೆ  ಸಾರಿಗೆ ನೌಕರರನ್ನು ಮನವೊಲಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.

ಸಭೆಯಲ್ಲಿ ಕೆಎಸ್ ಆರ್ ಟಿಸಿ ಬಿಎಂಟಿಸಿ ಸೇರಿ ನಾಲ್ಕು ನಿಗಮಗಳ ಮುಖಂಡರು, ಅಧಿಕಾರಿಗಳು ಭಾಗಿಯಾಗಿದ್ದರು.   ಸಭೆ ವಿಫಲವಾದ ಹಿನ್ನೆಲೆಯಲ್ಲಿ ಮೇ 20 ರಂದು ಸಾರಿಗೆ ನೌಕರರ ಮುಷ್ಕರ ಫಿಕ್ಸ್  ಎನ್ನಲಾಗಿದೆ.ಸಾರಿಗೆ ನೌಕರರ ಜೊತೆ ಸರ್ಕಾರದ ಸಂಧಾನ ಸಭೆ ವಿಫಲ: ಮುಷ್ಕರ ಫಿಕ್ಸ್ jk02_new jk02 new

Key words: Government, meeting, transport, workers, fails