ಬೆಂಗಳೂರು,ಮೇ,18,2026 (www.justkannada.in): ಪ್ರಶ್ನೆ ಪತ್ರಿಕೆ ಸೋರಿಕೆ, ನೀಟ್ ಪರೀಕ್ಷೆ ರದ್ದಾದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಮಾತನಾಡಬೇಕು ಎಂದು ಮಾಜಿ ಸಂಸದ ಡಿ.ಕೆ ಸುರೇಶ್ ಆಗ್ರಹಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಸುರೇಶ್, ಪ್ರಧಾನಿ ಮೋದಿ ಎಲ್ಲದಕ್ಕೂ ಮಾತನಾಡುತ್ತಾರೆ. ನೀಟ್ ಅಕ್ರಮ ವಿಚಾರಕ್ಕೂ ಪ್ರಧಾನಿ ಮೋದಿ ಬಂದು ಮಾತನಾಡಬೇಕು ಎಂದು ಒತ್ತಾಯಿಸಿದರು.
ದೇಶದಲ್ಲಿ ಒನ್ ನೇಷನ್ ಒನ್ ಎಲೆಕ್ಷನ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಸುರೇಶ್, ದೇಶದಲ್ಲಿ ಒಂದೇ ಸಲಕ್ಕೆ ಎಲ್ಲರನ್ನು ಮುಗಿಸುವ ಪ್ರಯತ್ನ ಇದು. ಐದು ವರ್ಷಕ್ಕೊಮ್ಮೆ ದಂಡಯಾತ್ರೆ ಹೋಗುವ ಬದಲು ಒಂದೇ ಸಲಕ್ಕೆ ದಂಡಯಾತ್ರೆ ಹೋಗುವ ಪ್ರಯತ್ನವಾಗಿದೆ. ಬೇರೆ ಬೇರೆ ಸಮಯದಲ್ಲಿ ಚುನಾವಣೆ ಆಗಿದೆ. ಯಾವ ರೀತಿ ಆಡಳಿತ ಹಾಗೂ ನ್ಯಾಯ ಕೊಡುತ್ತೀರಿ ಅಂತಾ ಹೇಳಬೇಕು ಎಂದರು.
Key words: NEET, Cancel, PM Modi, speak, DK Suresh







