ಮೈಸೂರು,ಮೇ,16, 2026 (www.justkannada.in): ಭಾರತದ ಅತಿದೊಡ್ಡ ಗ್ರಾಮೀಣ ಕ್ರೀಡಾ ಉತ್ಸವ ಈಶ ಗ್ರಾಮೋತ್ಸವ, ತನ್ನ 2026 ರ ಆವೃತ್ತಿಗೆ ಮುಂಚೆ, ಕರ್ನಾಟಕದಾದ್ಯಂತ ಗ್ರಾಮೀಣ ಮಹಿಳೆಯರಿಗಾಗಿ ಉಚಿತ ಥ್ರೋಬಾಲ್ ತರಬೇತಿ ಶಿಬಿರಗಳನ್ನು ‘ಈಶ ಔಟ್ರೀಚ್’ ಮುಖಾಂತರ ಆಯೋಜಿಸುತ್ತಿದೆ.
ಈ ಬಾರಿ ಮೈಸೂರು, ದಕ್ಷಿಣ ಕನ್ನಡ, ವಿಜಯಪುರ, ಶಿವಮೊಗ್ಗದಲ್ಲಿ ಉಚಿತ ಥ್ರೋಬಾಲ್ ತರಬೇತಿವನ್ನು ಈಶ ಗ್ರಾಮೋತ್ಸವ ವತಿಯಿಂದ ಆಯೋಜಿಸಲಾಗಿದೆ.
14 ವರ್ಷಮೇಲ್ಪಟ್ಟ ಮಹಿಳೆಯರಿಗೆ ತರಬೇತಿ ಪಡೆಯಲು, ಈಶ ಗ್ರಾಮೋತ್ಸವಕ್ಕಾಗಿ ತಂಡಗಳನ್ನು ರಚಿಸಲು ಹಾಗೂ ₹5 ಲಕ್ಷದವರೆಗೆ ಬಹುಮಾನಗಳನ್ನು ಗೆಲ್ಲಲು ಈ ಉಪಕ್ರಮವು ಅವಕಾಶವನ್ನು ಒದಗಿಸುತ್ತದೆ.
ಈ ಶಿಬಿರಗಳು ರಾಜ್ಯದ ನಾಲ್ಕು ಸ್ಥಳಗಳಲ್ಲಿ ಬುಧವಾರದಿಂದ ಭಾನುವಾರವರೆಗೆ ಪ್ರತಿದಿನ ಸಂಜೆ 4 ರಿಂದ 6 ರವರೆಗೆ ನಡೆಯಲಿವೆ. ನೋಂದಣಿ ಉಚಿತವಾಗಿದ್ದು, isha.co/grm-camp ನಲ್ಲಿಆನ್ ಲೈನ್ ಮೂಲಕ ಮಾಡಬಹುದಾಗಿದೆ.
ಉಚಿತ ಥ್ರೋಬಾಲ್ ತರಬೇತಿದ ವಿವರ ಹೀಗಿದೆ..
ಮೈಸೂರು: ಮೇ 20–24, SMS ವಿದ್ಯಾಸಂಸ್ಥೆ, ಬೆಟ್ಟದಪುರ. ಸಂಪರ್ಕ: 9986629711
ದಕ್ಷಿಣ ಕನ್ನಡ: ಮೇ 20–24, ಅಲ್ವಾಸ್ ಪಿಯು ಕಾಲೇಜು ಮೈದಾನ, ವಿದ್ಯಾಗಿರಿ, ಮೂಡಬಿದ್ರೆ. ಸಂಪರ್ಕ: 945717428
ವಿಜಯಪುರ: ಮೇ 20–24, ತಾಲ್ಲೂಕು ಪಂಚಾಯತ್ ಕಚೇರಿ ಸಮೀಪ, ಬಬಲೇಶ್ವರ. 7483650257 ಸಂಪರ್ಕಿಸಬಹುದು.
ಶಿವಮೊಗ್ಗ: ಮೇ 27–31, ಸರ್ಕಾರಿ ಹಿರಿಯ ಪ್ರಾಥಮಿಕಶಾಲೆ, ಹರಗೊಪ್ಪ. 7676004899 ಸಂಪರ್ಕಿಸಬಹುದು.
Key words: ‘Free Throwball Training Camp Rural Women, Isha Gramotsava







