Wednesday, September 30, 2026

BDA Apartments

Home Front Page ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಪ್ರಧಾನಿ ಮೋದಿ ವಿರುದ್ದ ಸಚಿವ ವೆಂಕಟೇಶ್ ವಾಗ್ದಾಳಿ

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಪ್ರಧಾನಿ ಮೋದಿ ವಿರುದ್ದ ಸಚಿವ ವೆಂಕಟೇಶ್ ವಾಗ್ದಾಳಿ

ಚಾಮರಾಜನಗರ,ಮೇ,16,2026 (www.justkannada.in): ಪೆಟ್ರೋಲ್, ಡೀಸೆಲ್ ದರ  3ರೂ.ಏರಿಕೆಯಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಪಶುಸಂಗೋಪನಾ ಇಲಾಖೆ ಸಚಿವ ಕೆ.ವೆಂಕಟೇಶ್ ವಾಗ್ದಾಳಿ ನಡೆಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೆ.ವೆಂಕಟೇಶ್,  ಪಿಎಂ ಮೋದಿ ಬಡವರು, ಜನಸಾಮಾನ್ಯರ ಮೇಲೆ ಹೊರೆ ಹಾಕಿದ್ದಾರೆ. ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಾಗಿದ.  ಜನ ಹೇಗೆ ಬದುಕಬೇಕು ಈಗ ಯುದ್ದ ಇದೆ ಸರಿ ಈ ಹಿಂದೆ ಏಕೆ  ಬೆಲೆ ಜಾಸ್ತಿ ಮಾಡಿದ್ದರು ಎಂದು ಪ್ರಶ್ನಿಸಿದರು.

ಚುನಾವಣಾ ಆಯೋಗ ಜೂನ್  20ರಿಂದ ಎಸ್ ಐಆರ್ ಪ್ರಾರಂಭಿಸಲಿದೆ. ಸರಿಯಾಗಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಿ. ಪಶ್ಚಿಮ ಬಂಗಾಳದಲ್ಲಿ 90 ಲಕ್ಷ ಮತದಾರರನ್ನ ತೆಗೆದು ಹಾಕಿದ್ದಾರೆ ಎಂದು ಸಚಿವ ವೆಂಕಟೇಶ್ ಹೇಳಿದರು.ಪೆಟ್ರೋಲ್ jk02_new jk02 new

Key words: Petrol, diesel, price hike, Minister ,Venkatesh , PM Modi