Friday, August 14, 2026

BDA Apartments

Home Front Page ಮತದಾರರ ಪಟ್ಟಿ ಪರಿಷ್ಕರಣೆ: ಶೇ 86 ರಷ್ಟು ಮ್ಯಾಪಿಂಗ್ ಕೆಲಸ ಮುಗಿದಿದೆ-ರಾಜ್ಯ ಮುಖ್ಯ ಚುನಾವಣಾಧಿಕಾರಿ

ಮತದಾರರ ಪಟ್ಟಿ ಪರಿಷ್ಕರಣೆ: ಶೇ 86 ರಷ್ಟು ಮ್ಯಾಪಿಂಗ್ ಕೆಲಸ ಮುಗಿದಿದೆ-ರಾಜ್ಯ ಮುಖ್ಯ ಚುನಾವಣಾಧಿಕಾರಿ

ಬೆಂಗಳೂರು,ಮೇ,15,2026 (www.justkannada.in): ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ವಿಚಾರ. ರಾಜ್ಯದಲ್ಲಿ ಶೇ. 86 ರಷ್ಟು ಮ್ಯಾಪಿಂಗ್ ಕೆಲಸ ಮುಗಿದಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ತಿಳಿಸಿದ್ದಾರೆ.

ಇಂದು ಈ ಕುರಿತು ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್, ಕೊಡಗು ಜಿಲ್ಲೆಯಲ್ಲಿ ಶೇ 96 ರಷ್ಟು ಮ್ಯಾಪಿಂಗ್ ಕೆಲಸ ಮುಗಿದಿದೆ. ಚಿತ್ತಾಪುರದಲ್ಲಿ ಶೇ 99 ರಷ್ಟು ಮ್ಯಾಪಿಂಗ್ ಕೆಲಸ ಮಯುಗಿದೆ. ಡಿಸಿಗಳ ಜೊತೆ ಸಂಜೆ ಮ್ಯಾಪಿಂಗ್ ಕೆಲಸ ಕುರಿತು ವಿಡಿಯೋ ಕಾನ್ಫರೆನ್ಸ್ ಇದೆ. ಎಸ್ ಐಆರ್ ಫಾರಂನಲ್ಲಿ ಗಣತಿ ನಮೂನೆಯೇ ಮುಖ್ಯ. ಬೂತ್ ಮಟ್ಟದ ಅಧುಕಾರಿಗಳು  ಪ್ರತಿ ಮನೆಗೆ 2 ಸೆಟ್ ಗಣತಿ ನಮೂನೆಯನ್ನು ತಲುಪಿಸುತ್ತಾರೆ ಎಂದರು.

ಗಣತಿ ನಮೂನೆ ಮನೆಗೆ ತಂದಾಗ 1 ಸೆಟ್ ಭರ್ತಿ ಮಾಡಿಕೊಡಬೇಕು. ಗಣತಿ ನಮೂನೆಯ ಪ್ರತಿ ಮತದಾರರಿಗೂ ಕ್ಯೂಆರ್ ಕೋಡ್ ಇರುತ್ತೆ. 2002ರ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಪರಿಶೀಲನೆಗೆ ಬರುತ್ತೆ ಎಂದರು.

ಎಸ ಐಆರ್ ಗೆ ಈಗಾಗಲೇ ದಿನಾಂಕ ನಿಗದಿಯಾಗಿದೆ. ಜೂನ್ 20ರಿಂದ ತರಬೇತಿ ಮುದ್ರಣ ಕಾರ್ಯ ಶುರುವಾಗಲಿದೆ. ಜೂನ್ 30 ರಿಂದ  ಜುಲೈ 29ರವರೆಗೆ ಮನೆ ಮನೆಗೆ ಭೇಟಿ ನೀಡಿ ಪರಿಷ್ಕರಣೆ ಮಾಡಲಾಗುತ್ತದೆ. ಅಕ್ಟೋಬರ್ 7 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ ಮಾಡುತ್ತೇವೆ ಎಂದರು.

Key words: Voter list, revision, 86% mapping work, completed, State Chief Electoral Officer