Wednesday, September 30, 2026

BDA Apartments

Home Front Page ಬಿಜೆಪಿ ಹಿಜಾಬ್ ವಿರೋಧಿ ಅಲ್ಲ, ಆದರೆ ಶಾಲೆಯಲ್ಲಿ ಸಮವಸ್ತ್ರ ಇರಲಿ- MLC ಸಿ.ಟಿ ರವಿ

ಬಿಜೆಪಿ ಹಿಜಾಬ್ ವಿರೋಧಿ ಅಲ್ಲ, ಆದರೆ ಶಾಲೆಯಲ್ಲಿ ಸಮವಸ್ತ್ರ ಇರಲಿ- MLC ಸಿ.ಟಿ ರವಿ

ಬೆಂಗಳೂರು,ಮೇ,14,2026 (www.justkannada.in):  ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಗೆ ಅವಕಾಶ ವಿಚಾರ ಸಂಬಂಧ ಬಿಜೆಪಿ ಹಿಜಾಬ್ ವಿರೋಧಿ ಅಲ್ಲ, ಆದರೆ ಶಾಲೆಯಲ್ಲಿ ಸಮವಸ್ತ್ರ ಇರಲಿ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಹೇಳಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ  ಎಂಎಲ್ ಸಿ ಸಿ.ಟಿ ರವಿ, ಅಕ್ಷರ ಜ್ಞಾನ ಹೆಚ್ಚಿಸಬೇಕಿದ್ದ ಶಿಕ್ಷಣ ಸಚಿವರಿಗೆ ಅದರ ಅರಿವು ಇಲ್ಲ. ಮತೀಯ ಭಾವನೆಗೆ ಜಾತ್ಯಾತೀತ ಬಣ್ಣ ನೀಡಿದ್ದಾರೆ . 1983 ರಲ್ಲೇ ನೀತಿ ವಸ್ತ್ರ ಸಂಹಿತೆ ತಂದಿದ್ದಾರೆ.  ಆಯಾ ಶಾಲೆಯ ಆಡಳಿತ ಮಂಡಳಿಗೆ ಜವಾಬ್ದಾರಿ ನೀಡಿದ್ದಾರೆ. ಈಗ ಸರ್ಕಾರ ಮತೀಯ ಓಲೈಕೆ ರಾಜಕೀಯ ಮುಂದುವರೆಸಿದೆ ಅದರ ಪರಿಣಾಮ ಶಾಲೆಗಳಲ್ಲಿ ಹಿಜಾಬ್ ಗೆ ಅನುಮತಿ ನೀಡಿದ್ದಾರೆ ಎಂದು ಕಿಡಿಕಾರಿದರು.ಬಿಜೆಪಿ ಹಿಜಾಬ್ ವಿರೋಧಿ ಅಲ್ಲ hijab

ಎಲ್ಲಾ ಮತ ಸಂಪ್ರದಾಯಗಳನ್ನು ಸರ್ಕಾರ ಗೌರವಿಸಲಿದೆಯೇ? ಹಾಗಿದ್ದರೇ ಎಲ್ಲಾ ಸಂಪ್ರದಾಯಕ್ಕೂ ಅವಕಾಶ ನೀಡುತ್ತಾರಾ ಹಿಜಾಬ್ ಗೆ ಅವಕಾಶ  ನೀಡಿ ಕೇಸರಿಗೆ ಶಾಲಿಗೆ ಅವಕಾಶವಿಲ್ಲ ಎಂದಿದ್ದೀರಿ. ಕೇಸರಿ ಶಾಲು ನಿರಾಕರಿಸಿದ್ದು ಯಾಕೆ..? ಎಂದು ಸಿಟಿ ರವಿ ವಾಗ್ದಾಳಿ ನಡೆಸಿದರು.ಆದರೆ ಶಾಲೆಯಲ್ಲಿ ಸಮವಸ್ತ್ರ ಇರಲಿ jk02

Key words:  BJP, not, against, hijab, MLC, CT Ravi