ಮೈಸೂರು,ಮೇ,14,2026 (www.justkannada.in): ಮೈಸೂರು ನಗರ ವ್ಯಾಪ್ತಿಯಲ್ಲಿ ರಿಂಗ್ ರೋಡ್ ಒಳ ಭಾಗದಲ್ಲಿ ಹಾಲಿ ಇರುವ 11 ಕೆ.ವಿ. ಓವರ್ ಹೆಡ್ ವಿದ್ಯುತ್ ಮಾರ್ಗಗಳನ್ನು ಭೂಗತ ಕೇಬಲ್ ನಿಂದ ಬದಲಾಯಿಸುವ ಕಾಮಗಾರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಶ್ರೀರಾಂಪುರದ ಬಳಿ ಇರುವ ನಾಯ್ಡು ಸ್ಟೋರ್ ಬಳಿ ಪರಿಶೀಲನೆ ನಡೆಸಿದರು.
ಇಂದು ಸಿಎಂ ಸಿದ್ದರಾಮಯ್ಯ ಮೈಸೂರು ಪ್ರವಾಸದಲ್ಲಿದ್ದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದಿಂದ ಮೈಸೂರು ನಗರ ವ್ಯಾಪ್ತಿಯಲ್ಲಿ (ರಿಂಗ್ ರೋಡ್ ಒಳ ಭಾಗದಲ್ಲಿ) ಹಾಲಿ ಇರುವ 11 ಕೆ.ವಿ. ಓವರ್ ಹೆಡ್ ವಿದ್ಯುತ್ ಮಾರ್ಗಗಳನ್ನು ಭೂಗತ ಕೇಬಲ್‌ನಿಂದ ಬದಲಾಯಿಸುವ ಕಾಮಗಾರಿ ಪರಿಶೀಲಿಸಿದರು.
ಈ ಕಾಮಗಾರಿಯ ಒಟ್ಟು ಕಾರ್ಯಾಪ್ರೇಷಣಾ ಮೊತ್ತ ರೂ. 588.24 ಕೋಟಿಗಳಾಗಿದೆ. ಕಾಮಗಾರಿಯನ್ನು ಪೂರ್ಣಗೊಳಿಸಲು 2 ವರ್ಷ ಅವಧಿಯನ್ನು ನಿಗದಿಪಡಿಸಲಾಗಿದೆ. ಕಾಮಗಾರಿಯಲ್ಲಿ ಒಟ್ಟು 871.09 ಕಿ.ಮೀ ಭೂಗತ ಕೇಬಲ್ ಅಳವಡಿಕೆ, 474 ಸಂಖ್ಯೆಗಳ ಆರ್.ಎಂ.ಯು ಹಾಗೂ 11 ಸಂಖ್ಯೆಯ ಕಾಂಪ್ಯಾಕ್ಟ್ ಸಬ್ ಸ್ಟೇಷನ್ ಗಳನ್ನು ಅಳವಡಿಸಲು ಉದ್ದೇಶಿಸಲಾಗಿದ್ದು, ಸದರಿ ಕಾಮಗಾರಿಯನ್ನು ನಿರ್ವಹಿಸಲು 4 ವಿವಿಧ ಗುತ್ತಿಗೆದಾರರಿಗೆ ಮಾರ್ಚ್-2025 ರಲ್ಲಿ ಕಾರ್ಯಾಪ್ರೇಷಣೆಯನ್ನು ನೀಡಲಾಗಿದೆ.
ಈಗಾಗಲೇ 227.12 ಕಿ.ಮೀ ಭೂಗತ ಕೇಬಲ್ ಮತ್ತು 160 ಸಂಖ್ಯೆಯ ಆರ್.ಎಂ.ಯು ಗಳನ್ನು ಅಳವಡಿಸಲಾಗಿದ್ದು, ಶೇಕಡ 26.07 ರಷ್ಟು ಪ್ರಗತಿ ಸಾಧಿಸಲಾಗಿರುತ್ತದೆ. ಕಾಮಗಾರಿಯನ್ನು ನಿರ್ಧಿಷ್ಟ ಸಮಯದಲ್ಲಿ ಪೂರ್ಣಗೊಳಿಸಲು ಅವಶ್ಯವಿರುವ ಎಲ್ಲಾ ಕ್ರಮವಹಿಸಲಾಗುತ್ತಿದೆ.
Key words: CM Siddaramaiah, inspects, underground, cable, power lines, Mysore







