Monday, September 28, 2026

BDA Apartments

Home Front Page ಕೇಂದ್ರದಲ್ಲಿ 1.5 ಲಕ್ಷ ಕೋಟಿ ನಷ್ಟ: ಈ ಬಗ್ಗೆ ಮಾತಾನಾಡೋದೆ ಇಲ್ಲ- ಸಚಿವ ಸಂತೋಷ್ ಲಾಡ್...

ಕೇಂದ್ರದಲ್ಲಿ 1.5 ಲಕ್ಷ ಕೋಟಿ ನಷ್ಟ: ಈ ಬಗ್ಗೆ ಮಾತಾನಾಡೋದೆ ಇಲ್ಲ- ಸಚಿವ ಸಂತೋಷ್ ಲಾಡ್ ಟಾಂಗ್

ಧಾರವಾಡ,ಮೇ,13,2026 (www.justkannada.in): ಕೇಂದ್ರ ಸರ್ಕಾರ ತುಂಬಾನೇ ನಷ್ಟದಲ್ಲಿದೆ. ಕೇಂದ್ರಕ್ಕೆ 1.5 ಲಕ್ಷ ಕೋಟಿ ನಷ್ಟವಾಗುತ್ತಿದೆ.  ಈ ಬಗ್ಗೆ ಕೇಂದ್ರ ಸರ್ಕಾರ ಮಾತಾನಾಡೋದೆ ಇಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಟಾಂಗ್ ಕೊಟ್ಟರು.

ಒಂದು ವರ್ಷಗಳ ಕಾಲ ಇಂಧನ ಮಿತ ಬಳಕೆ, ಚಿನ್ನ ಖರೀದಿಸಬೇಡಿ ಎಂಬ ಪ್ರಧಾನಿ ಮೋದಿ ಹೇಳಿಕೆ ಕುರಿತು ಮಾತನಾಡಿದ ಸಚಿವ ಸಂತೋಷ್ ಲಾಡ್, 2015ರಲ್ಲಿ ಮೋದಿ ಅವರು ಸಾವರಿನ್ ಗೋಲ್ಡ್ ಬಾಂಡ್ ಯೋಜನೆ ತಂದಿದ್ರು. ಹೂಡಕೆ ಮಾಡಿದರೆ ವರ್ಷಕ್ಕೆ ಶೇ 2.5ರಷ್ಟು ಬಡ್ಡಿ ಅಂದರು.  ಅದರೆ ಇವತ್ತು ಮೋದಿ ಅವರೇ ಬಂಗಾರ ಖರೀದಿಸಬೇಡಿ ಅಂದಿದ್ದಾರೆ. 10 ವರ್ಷಗಳಲ್ಲಿಈ ಯೋಜನೆಯಡಿ 150 ಟನ್ ಚಿನ್ನ ಖರೀದಿಸಿದ್ದಾರೆ ಇದೀಗ ಬಂಗಾರದ ಬೆಲೆ ಹೆಚ್ಚಾಗಿದ್ದರಿಂದ ಹಣ ವಾಪಸ್ ನೀಡುತ್ತಿಲ್ಲ ಎಂದು ಆರೋಪಿಸಿದರು.

ಈ ಯೋಜನೆ 2034ರವರೆಗೆ ಜಾರಿಯಲ್ಲಿರಬೇಕತ್ತು.  ಇದರಲ್ಲಿ ಯಾರ್ಯಾರು ದುಡ್ಡು ಹಾಕಿದ್ದಾರೋ ಅವರ ಮಾಹಿತಿ ಕೊಡುತ್ತಿಲ್ಲ. 1 ಲಕ್ಷ ಹೂಡಿಕೆ ಮಾಡಿದವರಿಗೆ ಇಂದು 4 ಲಕ್ಷ ರೂ ಕೊಡಬೇಕಿತ್ತು.  ಇದು ಮಧ್ಯಮ ವರ್ಗದ ಜನರ ದುಡ್ಡಾಗಿದೆ .  ಕೇಂದ್ರ ತುಂಬಾನೇ ನಷ್ಟದಲ್ಲಿದೆ. 1.5 ಲಕ್ಷ ಕೋಟಿ ನಷ್ಟವಾಗುತ್ತಿದೆ.  ಈ ಬಗ್ಗೆ ಕೇಂದ್ರ ಸರ್ಕಾರ ಮಾತಾನಾಡೋದೆ ಇಲ್ಲ. ಯಾವ ಸರ್ಕಾರಗಳಲ್ಲಿ ಯಾವಹಗರಣಗಳಾಗಿವೆ ಅದರ ವಿರುದ್ದ ಹೋರಾಟ ಮಾಡಬೇಕು. ಹಗರಣಗಳ ವಿರುದ್ದ ಜೆನ್ ಜಿ ಯುವಕರು ಹೋರಾಟ ಮಾಡಬೇಕಿದೆ ಎಂದು  ಸಚಿವ ಸಂತೋಷ್ ಲಾಡ್ ಹೇಳಿದರು.ಕೇಂದ್ರದಲ್ಲಿ 1.5 ಲಕ್ಷ ಕೋಟಿ ನಷ್ಟ jk02

Key words: Loss, 1.5 lakh crores, Central Government, Minister, Santosh Lad