Thursday, September 24, 2026

BDA Apartments

Congress MĻ̧A BDA JK_Adv BDA Adv
Home Front Page ಪ.ಬಂಗಾಳದ ನೂತನ ಸಿಎಂ ಆಗಿ ಸುವೇಂದು ಅಧಿಕಾರಿ ಪ್ರಮಾಣ ವಚನ ಸ್ವೀಕಾರ: ಪ್ರಧಾನಿ ಮೋದಿ ಭಾಗಿ

ಪ.ಬಂಗಾಳದ ನೂತನ ಸಿಎಂ ಆಗಿ ಸುವೇಂದು ಅಧಿಕಾರಿ ಪ್ರಮಾಣ ವಚನ ಸ್ವೀಕಾರ: ಪ್ರಧಾನಿ ಮೋದಿ ಭಾಗಿ

ಕೋಲ್ಕತ್ತಾ,ಮೇ,9,2026 (www.justkannada.in): ಪಶ್ಚಿಮ ಬಂಗಾಳದಲ್ಲಿ 15 ವರ್ಷಗಳ ಕಾಲ ಅಧಿಕಾರ ನಡೆಸಿದ್ದ ಮಮತಾ ಬ್ಯಾನರ್ಜಿ ನೇತೃತ್ವ ಟಿಎಂಸಿಯನ್ನ ವಿಧಾನಸಭಾ ಚುನಾವಣೆಯಲ್ಲಿ  ಸೋಲಿಸಿ ಬಿಜೆಪಿ ಅಧಿಕಾರದ ಗದ್ದುಗೆಗೇರಿದ್ದು ಇಂದು ನೂತನ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಪ್ರಮಾಣ ವಚನ ಸ್ವೀಕಾರ ಮಾಡಿದರು.

ಇಂದು  ಕೋಲ್ಕತ್ತಾದ  ಬ್ರಿಗೇಡ್ ಪರೇಡ್  ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಪಶ್ಚಿಮ ಬಂಗಾಳದ ನೂತನ ಸಿಎಂ ಆಗಿ ಸುವೇಂದು ಅಧಿಕಾರಿ  ಹಾಗೂ ಐವರು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಪಶ್ಚಿಮ ಬಂಗಾಳದ ರಾಜ್ಯಪಾಲ ಆರ್.ಎನ್ ರವಿ ಪ್ರತಿಜ್ಞಾವಿಧಿ ಬೋಧಿಸಿದರು.  ಈ ಮೂಲಕ ಸುವೇಂದು ಅಧಿಕಾರಿ ಪ. ಬಂಗಾಳದಲ್ಲಿ ಬಿಜೆಪಿಯಿಂದ ಮೊದಲ ಸಿಎಂ ಆಗಿ ಅಧಿಕಾರ ಸ್ವೀಕರಿದ್ದಾರೆ.

ಇನ್ನು ಅಶೋಕ್ ಕೀರ್ತನಿಯಾ,  ನಿಶಿತ್ ಪ್ರಾಮಾಣಿಕ್, ಅಗ್ನಿಮಿತ್ರಾ ಪಾಲ್,  ಕ್ಷುದಿರಾಮ್ ತುಡು, ದಿಲೀಪ್ ಘೋಷ್ ಸಚಿವರಾಗಿ ಪದಗ್ರಹಣ ಮಾಡಿದರು.

ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು  ಸೇರಿ ಹಲವು ರಾಜಕೀಯ ನಾಯಕರು ಉಪಸ್ಥಿತರಿದ್ದರು .

Key words: Suvendu Adhikari, oath , new CM , West Bengal