Sunday, August 9, 2026

BDA Apartments

Home Front Page ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಕಸರತ್ತು: DCM ಹುದ್ದೆ, ಪ್ರಮುಖ ಖಾತೆಗೆ ಬೇಡಿಕೆಯಿಟ್ಟ VCK

ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಕಸರತ್ತು: DCM ಹುದ್ದೆ, ಪ್ರಮುಖ ಖಾತೆಗೆ ಬೇಡಿಕೆಯಿಟ್ಟ VCK

ಚೆನ್ನೈ, ಮೇ 9,2026 (www.justkannada.in):  ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನ ಪಡೆದು ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ನಟ ರಾಜಕೀಯ ನಾಯಕ ದಳಪತಿ ವಿಜಯ್ ನೇತೃತ್ವದ ಟಿವಿಕೆ  ಪಕ್ಷ ಸರ್ಕಾರ ರಚನೆಗೆ ತೀವ್ರ ಕಸರತ್ತು ನಡೆಸುತ್ತಿದೆ.

ಚುನಾವಣೆಯಲ್ಲೇ ಬರೋಬ್ಬರಿ 108 ಸ್ಥಾನಗಳನ್ನು ಪಡೆದ ವಿಜಯ್  ಅವರ ಟಿವಿಕೆ ಬಹುಮತ ಲಭಿಸದ ಹಿನ್ನೆಲೆಯಲ್ಲಿ  ಸರ್ಕಾರ ರಚನೆಗೆ ಇತರೆ ಪಕ್ಷಗಳ ಮೇಲೆ ಅವಲಂಭಿಸಿದೆ.  ಇದೀಗ ಕಾಂಗ್ರೆಸ್ ಬೆಂಬಲಿಸಿದ್ದು ಸಿಪಿಐನ 2, ಸಿಪಿಎಂನ 2 ಸ್ಥಾನಗಳು ಸೇರಿ ವಿಜಯ್ ಅವರಿಗೆ 116  ಆಗಿದೆ. ಆದರೆ ಎರಡು ಸ್ಥಾನಗಳನ್ನ ಗೆದ್ದಿರುವ ವಿದುತಲೈ ಚಿರುತೈಗಳ ಕಚ್ಚಿ (ವಿಸಿಕೆ) ಬೆಂಬಲ ನೀಡಲು ಇದೀಗ ಟಿವಿಕೆ ಪಕ್ಷದ ಮುಂದೆ ಡಿಸಿಎಂ ಹುದ್ದೆ ಮತ್ತು ಪ್ರಮುಖ ಖಾತೆಗೆ ಬೇಡಿಕೆಯಿಟ್ಟಿದೆ.

ವಿಸಿಕೆ ನಾಯಕ ತೊಲ್ ತಿರುಮಾವಳವನ್ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ. ಹಾಗೆಯೇ ಸರ್ಕಾರದಲ್ಲಿ ಪ್ರಮುಖ ಖಾತೆಗಳು ಮತ್ತು ಅಧಿಕಾರ ಹಂಚಿಕೆಗೆ ವಿಸಿಕೆ ಪಟ್ಟು ಹಿಡಿದಿದೆ ಎನ್ನಲಾಗಿದೆ.

ವಿಜಯ್ 2 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವುದರಿಂದಾಗಿ ಟಿವಿಕೆ ಬಳಿ ಈಗಿರುವ ಸಂಖ್ಯೆ 107. ಇದರ ಜೊತೆ ಕಾಂಗ್ರೆಸ್​ನ 5, ಸಿಪಿಐನ 2, ಸಿಪಿಎಂನ 2 ಸ್ಥಾನಗಳು ಸೇರಿ ವಿಜಯ್ ಅವರಿಗೆ ಇರುವ ಸಂಖ್ಯೆ 116 ಆಗಿದೆ. ಆದರೆ, ಸರ್ಕಾರ ರಚನೆಗೆ ವಿಜಯ್​ಗೆ 118 ಸ್ಥಾನಗಳು ಬೇಕಾಗಿವೆ. ಒಂದುವೇಳೆ ವಿಸಿಕೆ ತನ್ನ ಬಳಿ ಇರುವ ಇಬ್ಬರು ಶಾಸಕರ ಬೆಂಬಲ ಘೋಷಿಸಿದರೆ ಮಾತ್ರ ವಿಜಯ್ ಮುಖ್ಯಮಂತ್ರಿಯಾಗಲು ಸಾಧ್ಯವಾಗಲಿದೆ.

Key words: Tamil Nadu, TVK,  government, VCK, demands