ಕೋಲ್ಕತ್ತಾ,ಮೇ,5,2026 (www.justkannada.in): ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 207 ಸ್ಥಾನಗಳನ್ನ ಪಡೆಯುವ ಮೂಲಕ ಭರ್ಜರಿ ಜಯಸಾಧಿಸಿದ್ದು ಇತ್ತ ಟಿಎಂಸಿ ಸೋಲನ್ನ ಒಪ್ಪಿಕೊಳ್ಳಲು ಸಿಎಂ ಮಮತಾ ಬ್ಯಾನರ್ಜಿ ನಿರಾಕರಿಸಿದ್ದಾರೆ.
ಹೌದು, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಗೆದ್ದಿದೆ. ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ. ನಿಷ್ಪಕ್ಷಪಾತವಾಗಿ ಚುನಾವಣೆ ನಡೆದಿಲ್ಲ ಹೀಗಾಗಿ ರಾಜೀನಾಮೆ ನೀಡಲ್ಲ. ನಿಷ್ಪಕ್ಷಪಾತವಾಗಿ ಚುನಾವಣೆ ನಡೆದಿದ್ದರೇ ರಾಜೀನಾಮೆ ನೀಡುತ್ತಿದ್ದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಮಮತಾ ಬ್ಯಾನರ್ಜಿ, ನಾಣು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ. ರಾಜಭವನಕ್ಕೆ ಹೋಗಿ ರಾಜೀನಾಮೆ ನೀಡಲ್ಲ. ನನ್ನಿಂದ ಬಲವಂತವಾಗಿ ರಾಜೀನಾಮೆ ಪಡೆಯಲು ಆಗಲ್ಲ. ಟಿಎಂಸಿ ಸೋತಿಲ್ಲ ನಾವು ಗೆಲ್ಲಬೇಕಾದ 100 ಕ್ಷೇತ್ರಗಳಲ್ಲಿ ಮತಗಳ್ಳತನವಾಗಿದೆ. ನಾವು ಚುನಾವಣೆಯಲ್ಲಿ ಸೋತಿಲ್ಲ. ಆದರೆ ನಮ್ಮ ಗೆಲುವನ್ನ ಕಿತ್ತುಕೊಳ್ಳಲಾಗಿದೆ. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ವೋಟ್ ಚೋರಿ ಆಗಿದೆ. ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಆರೋಪಿಸಿದರು.
ದೇಶದಲ್ಲಿ ಬಿಜೆಪಿಯ ಆಡಳಿತ ಮಾತ್ರ ಇರಬೇಕೆಂದು ಬಯಸುತ್ತಾರೆ. ಇಂತಹ ಅತ್ಯಾಚಾರಿ ಬಿಜೆಪಿ ಸರ್ಕಾರವನ್ನು ನಾನೆಂದು ನೋಡಿಲ್ಲ. ಚುನಾವಣಾ ಆಯೋಗ ಮಾರಾಟವಾಗಿದೆ. ವಾಮಮಾರ್ಗದ ಮೂಲಕ ಬಿಜೆಪಿ ಗೆದ್ದಿದೆ ಎಂದು ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.
Key words: West Bengal, Mamata Banerjee, not resign, CM, Position







