Saturday, September 19, 2026

BDA Apartments

ಪ. ಬಂಗಾಳ, ಅಸ್ಸಾಂನಲ್ಲಿನ ಜಯ ಬಿಜೆಪಿಯದ್ದಲ್ಲ, ಅದು ಚು.ಆಯೋಗದ್ದು- ಪ್ರಿಯಾಂಕ್...
Home Front Page ಪ. ಬಂಗಾಳ, ಅಸ್ಸಾಂನಲ್ಲಿನ ಜಯ ಬಿಜೆಪಿಯದ್ದಲ್ಲ, ಅದು ಚು.ಆಯೋಗದ್ದು- ಪ್ರಿಯಾಂಕ್ ಖರ್ಗೆ ಕಟು ಟೀಕೆ

ಪ. ಬಂಗಾಳ, ಅಸ್ಸಾಂನಲ್ಲಿನ ಜಯ ಬಿಜೆಪಿಯದ್ದಲ್ಲ, ಅದು ಚು.ಆಯೋಗದ್ದು- ಪ್ರಿಯಾಂಕ್ ಖರ್ಗೆ ಕಟು ಟೀಕೆ

ಬೆಂಗಳೂರು,ಮೇ,5,2026 (www.justkannada.in): ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಬಿಜೆಪಿಯ ಜಯ ಜಯವೇ ಅಲ್ಲ ಅದು ಚುನಾವಣಾ ಆಯೋಗದ ಜಯ ಎಂದು ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ  ಕಟುವಾಗಿ ಟೀಕಿಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಯಾವ ರೀತಿ ಪಶ್ಚಿಮ ಬಂಗಾಳದಲ್ಲಿ ಎಸ್ ಐಆರ್ ನಡೆಸಿದ್ದಾರೆ. 1 ಕೋಟಿ ಜನರನ್ನ ಮತದಾರರ ಪಟ್ಟಿಯಿಂದ ತೆಗೆಯಲಾಗಿದೆ.  ಇದು ಚುನಾವಣೆ ಆಯೋಗದ ಜಯವೇ ಹೊರತು ಪಕ್ಷದ್ದಲ್ಲ. ಆಯೋಗದ ಕೆಲಸವನ್ನ ಸಂಪೂರ್ಣವಾಗಿ ನಾಶ ಮಾಡಲಾಗಿದೆ. ಚುನಾವಣಾ ಆಯೋಗವನ್ನು ಬಿಜೆಪಿ ಜೇಬಿನಲ್ಲಿ ಇಟ್ಟುಕೊಳ್ಳಲಾಗಿದೆ ಎಂದು ಲೇವಡಿ ಮಾಡಿದರು.

ಮಹಾರಾಷ್ಟ್ರ, ಮಧ್ಯಪ್ರದೇಶ ಹರಿಯಾಣದಲ್ಲಿ ಹೇಗೆ ಎಲೆಕ್ಷನ್ ಆಯಿತು ಅದೇ ರೀತಿ ಪಶ್ಚಿಮ ಬಂಗಾಳದ ಹಾಗೂ ಅಸ್ಸಾಂನಲ್ಲಿ ಆಗಿದೆ. ಪಶ್ಚಿಮಬಂಗಳದಲ್ಲಿ 80 ರಿಂದ 100 ಸೀಟುಗಳಿಗೆ ಹೊಡೆತ ಬಿದ್ದಿದೆ. ಅದರಲ್ಲಿ ಮುಚ್ಚು ಮರೆ ಇಲ್ಲ. ಮುಂದೆ ಕರ್ನಾಟಕದಲ್ಲಿ ಈ ರೀತಿ ಆಗುತ್ತೆ ಅದರಲ್ಲಿ ಆಶ್ಚರ್ಯವೇ ಇಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

Key words: victory, West Bengal, Assam, not, BJP, Priyank Kharge