Wednesday, August 5, 2026

BDA Apartments

Home Front Page ಸಿದ್ದರಾಮಯ್ಯ ಜನಪ್ರಿಯತೆ, ಗ್ಯಾರಂಟಿ ನಮ್ಮ ಕೈಹಿಡಿದಿದೆ – ಸಚಿವ ಆರ್.ಬಿ ತಿಮ್ಮಾಪುರ

ಸಿದ್ದರಾಮಯ್ಯ ಜನಪ್ರಿಯತೆ, ಗ್ಯಾರಂಟಿ ನಮ್ಮ ಕೈಹಿಡಿದಿದೆ – ಸಚಿವ ಆರ್.ಬಿ ತಿಮ್ಮಾಪುರ

ಬಾಗಲಕೋಟೆ,ಮೇ,4,2026 (www.justkannada.in):  ಬಾಗಲಕೋಟೆ ಉಪಚುನಾವಣೆ ಫಲಿತಾಂಶ ಪ್ರಕಟ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಗೆಲುವಿನತ್ತ ಸಾಗುತ್ತಿದ್ದು ಈ ಕುರಿತು ಸಚಿವ ಆರ್.ಬಿ ತಿಮ್ಮಾಪುರ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಆರ್.ಬಿ ತಿಮ್ಮಾಪುರ, ಸಿದ್ದರಾಮಯ್ಯನವರ ಜನಪ್ರಿಯತೆ,  ಗ್ಯಾರಂಟಿ ನಮ್ಮ ಕೈಹಿಡಿಯಲಿದೆ ಬಾಗಲಕೋಟೆಯಲ್ಲಿ ನಮ್ಮದೇ ಗೆಲುವು ಅಹಿಂದ ಮತಗಳು ಕಾಂಗ್ರೆಸ್ ಪರವಾಗಿವೆ  ಎಂದಿದ್ದಾರೆ.

ಸಚಿವರು ಶಾಸಕರು, ನಾಯಕರ ಪರಿಶ್ರಮ ಗೆಲುವಿಗೆ ಕಾರಣ.  25 ಸಾವಿರ ಮತಗಳ ಅಂತರದಿಂದ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ. ಉಪಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿ ಅಲ್ಲ ಎಂದು ಆರ್.ಬಿ ತಿಮ್ಮಾಪುರ ತಿಳಿಸಿದರು.

Key words: Siddaramaiah, popularity, By-election, Win, Minister, R.B. Thimmapura