Sunday, September 20, 2026

BDA Apartments

ತಮಿಳುನಾಡು ಫಲಿತಾಂಶ ನಮಗೆ ಅಚ್ಚರಿ ತಂದಿದೆ-ಡಿಸಿಎಂ ಡಿಕೆ ಶಿವಕುಮಾರ್ BDA JK_Adv BDA Adv
Home Front Page ತಮಿಳುನಾಡು ಫಲಿತಾಂಶ ನಮಗೆ ಅಚ್ಚರಿ ತಂದಿದೆ-ಡಿಸಿಎಂ ಡಿಕೆ ಶಿವಕುಮಾರ್

ತಮಿಳುನಾಡು ಫಲಿತಾಂಶ ನಮಗೆ ಅಚ್ಚರಿ ತಂದಿದೆ-ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಮೇ,4,2026 (www.justkannada.in):  ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಹೊರ ಬೀಳುತ್ತಿದ್ದು ಈ ಮಧ್ಯೆ ತಮಿಳುನಾಡಿನಲ್ಲಿ ವಿಜಯ್ ದಳಪತಿ ನೇತೃತ್ವದ ಟಿವಿಕೆ ಭರ್ಜರಿ ಮುನ್ನಡೆ ಸಾಧಿಸಿದೆ. ಈ ಫಲಿತಾಂಶದ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಕೇರಳ,ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಕೇರಳದಲ್ಲಿ ನಿರೀಕ್ಷೆ ಇತ್ತು. ಕೇರಳ ಜನರು ನಿರೀಕ್ಷೆಯನ್ನ ಬಯಸಿದ್ದರು. ಆದರೆ ತಮಿಳುನಾಡು ಫಲಿತಾಂಶ ನಮಗೆ ಅಚ್ಚರಿ ತಂದಿದೆ. ಇಷ್ಟೊಂದು ಮೇಜರ್ ಶಿಫ್ಟ್ ಆಗುತ್ತೆ ಅಂದುಕೊಂಡಿರಲಿಲ್ಲ ಎಂದರು.

ಬಾಗಲಕೋಟೆ, ದಾವಣಗೆರೆ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮುನ್ನಡೆ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್, ಜನರು ನಮ್ಮ ಜೊತೆ ವಿಶ್ವಾಸದಲ್ಲಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 12 ಸಾವಿರ ಲೀಡ್ ಇದೆ. ಎಸ್ ಡಿಪಿಐಗೆ ಅಷ್ಟು ವೋಟ್‍ ಕ್ರಾಸ್ ಆಗುತ್ತೆ ಅಂದುಕೊಂಡಿರಲಿಲ್ಲ ಗ್ಯಾರಂಟಿ ಚೆನ್ನಾಗಿ ನಡೆಯುತ್ತಿದೆ ಎಂದರು.

Key words: Tamil Nadu, results, DCM, DK Shivakumar