Wednesday, September 16, 2026

BDA Apartments

50 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಸರ್ವೇ ಸೂಪರ್ ವೈಸರ್ BDA JK_Adv BDA Adv
Home Crime 50 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಸರ್ವೇ ಸೂಪರ್ ವೈಸರ್

50 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಸರ್ವೇ ಸೂಪರ್ ವೈಸರ್

ದಾವಣಗೆರೆ,ಮೇ,2,2026 (www.justkannada.in):  50 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಸರ್ವೇ ಸುರ್ವೈಸರ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ದಾವಣಗೆರೆಯಲ್ಲಿ ಚೆನ್ನಗಿರಿ ಎಡಿಎಲ್ ಆರ್ ಕಚೇರಿಯಲ್ಲಿ ನಡೆದಿದೆ.

ಸರ್ವೇ ಸೂಪರ್ ಕೆ.ಹೆಚ್ ಅಂಜಿನಪ್ಪ ಲೋಕಾಯುಕ್ತ ಬಲೆಗೆ ಬಿದ್ದವರು. ರೈತರೊಬ್ಬರ ಜಮೀನು ಹದ್ದುಬಸ್ತು ಮಾಡಿಕೊಡಲು 1 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು ಸ್ನೇಹಿತ ಶ್ರೀಧರ್ ಮೂಲಕ ರೈತರೊಬ್ಬರ ಬಳಿ 50 ಸಾವಿರ ರೂ  ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸರ್ವೆ ಸೂಪರ್ ಕೆಎಚ್ ಅಂಜಿನಪ್ಪ ಮಧುರ ನಾಯಕನಹಳ್ಳಿ ಎಬಿ ಕುಮಾರನಾಯಕ ಎಂಬುವವರ ಬಳಿ 50,000 ಲಂಚ ಪಡೆಯಲು ಮುಂದಾಗಿದ್ದರು ಎನ್ನಲಾಗಿದೆ.  ದಾವಣಗೆರೆ ನಗರದ ಹಳೆ ಬಸ್ ನಿಲ್ದಾಣದ ದ್ವಾರಕಾ ಲಾಡ್ಜ್ ನಲ್ಲಿ ಲೋಕಾಯುಕ್ತ ಅಧಿಕಾರಿಗಳು ಸರ್ವೆ ಸೂಪರ್ ಕೆಎಚ್ ಅಂಜಿನಪ್ಪ ಜೊತೆಗೆ ಸ್ನೇಹಿತ ಶ್ರೀಧರ್ ಅವರನ್ನು ವಶಕ್ಕೆ ಪಡೆದಿದ್ದಾರೆ.

Key words: Lokayukta, Survey Supervisor, bribe ,Rs. 50,000