Wednesday, September 16, 2026

BDA Apartments

ಕೇಂದ್ರ ಸರ್ಕಾರದಿಂದ ಶಿಷ್ಟಾಚಾರ ಉಲ್ಲಂಘನೆ – ಸಚಿವ ಸಂತೋಷ್ ಲಾಡ್ ಆಕ್ರೋಶ BDA JK...
Home Front Page ಕೇಂದ್ರ ಸರ್ಕಾರದಿಂದ ಶಿಷ್ಟಾಚಾರ ಉಲ್ಲಂಘನೆ – ಸಚಿವ ಸಂತೋಷ್ ಲಾಡ್ ಆಕ್ರೋಶ

ಕೇಂದ್ರ ಸರ್ಕಾರದಿಂದ ಶಿಷ್ಟಾಚಾರ ಉಲ್ಲಂಘನೆ – ಸಚಿವ ಸಂತೋಷ್ ಲಾಡ್ ಆಕ್ರೋಶ

ಬೆಂಗಳೂರು, ಮೇ. 2,2026 (www.justkannada.in): ದೊಡ್ಡಬಳ್ಳಾಪುರದ ಕಾರ್ಮಿಕ ಇಲಾಖೆ ಅಡಿಯಲ್ಲಿ ಬರುವ ಇಎಸ್ ಐ ಆಸ್ಪತ್ರೆಯನ್ನು  ಉದ್ಘಾಟನೆ ಕಾರ್ಯಕ್ರಮದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಶಿಷ್ಟಾಚಾರ ಉಲ್ಲಂಘಿಸಿದಕ್ಕೆ ರಾಜ್ಯದ ಕಾರ್ಮಿಕ ಇಲಾಖೆ ಆಕ್ರೋಶ ವ್ಯಕ್ತಪಡಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಾರ್ಮಿಕ ಇಲಾಖೆ,  ರಾಜ್ಯದ ದೊಡ್ಡಬಳ್ಳಾಪುರಡ 100 ಹಾಸಿಗೆಗಳ ಇಎಸ್ ಐ ಆಸ್ಪತ್ರೆಯ ಉದ್ಘಾಟನೆ ನಾಳೆ ಭಾನುವಾರ ಮೇ 3ರಂದು ನಡೆಯಲಿದ್ದು, ಇದರ ಶಿಲಾನ್ಯಾಸ ಉದ್ಘಾಟನೆ ಕಾರ್ಯಕ್ರಮಕ್ಕೆ ರಾಜ್ಯದ ಬಿಜೆಪಿ ಸಚಿವರನ್ನು ಮಾತ್ರ ಆಹ್ವಾನಿಸಿದಲ್ಲದೇ ಸದರಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ  ರಾಜ್ಯದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಹೆಸರನ್ನು ಮುದ್ರಿಸಿಲ್ಲ. ಕಾರ್ಮಿಕ ಇಲಾಖೆಯ ಕಾರ್ಯಕ್ರಮಕ್ಕೆ ಸಂಬಂಧಪಟ್ಟ ರಾಜ್ಯದ ಕಾರ್ಮಿಕ ಸಚಿವರನ್ನೇ ಕಡೆಗಣಿಸಿರುವುದು ಸಲ್ಲದ್ದಾಗಿದೆ. ಜನರ ಸೇವೆಯ ಆಸ್ಪತ್ರೆಯಲ್ಲಿಯೂ ಸಹ ಬಿಜೆಪಿ ರಾಜಕೀಯ ಮೆರೆದಿದೆ ಎಂದು  ಟೀಕಿಸಿದೆ.

ಹೀಗೇ ಸಂಬಂಧಪಟ್ಟ ಇಲಾಖೆಯ ಕಾರ್ಯಕ್ರಮಕ್ಕೆ ರಾಜ್ಯದ ಕಾರ್ಮಿಕ ಸಚಿವರನ್ನೇ ಕಡೆಗಣಿಸಿರುವುದು ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಹೀಗೇ ಶಿಷ್ಟಾಚಾರ ಉಲ್ಲಂಘಿಸಿರುವ ಕೇಂದ್ರ ಸರ್ಕಾರ ಹಾಗೂ ಅದರ ಅಧಿಕಾರಿಗಳ ವಿರುದ್ದ ರಾಜ್ಯ ಕಾರ್ಮಿಕ ಇಲಾಖೆ ಕಿಡಿಕಾರಿದೆ.

ಈ ಆಸ್ಪತ್ರೆ ಬೆಂಗಳೂರು ಗ್ರಾಮಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ರಾಜ್ಯ ಸರ್ಕಾರದ ಜಮೀನಿನಲ್ಲಿ ಹಾಗೂ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯ ಆರ್ಥಿಕ ನೆರವಿನೊಂದಿಗೆ ನಿರ್ಮಾಣ ಮಾಡಲಾಗಿದೆ. ನಿರ್ಮಾಣದ ನಂತರ ಆಸ್ಪತ್ರೆಯನ್ನು ನಿರ್ವಹಣೆಯ ಅನುಕೂಲಕ್ಕಾಗಿ ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಲಾಗಿತ್ತು. ಈ ಆಸ್ಪತ್ರೆಯನ್ನು ಇದೇ ಮೇ 3ರಂದು ಉದ್ಘಾಟನೆ ಮಾಡಲಾಗುತ್ತಿದ್ದು, ಈ ಉದ್ಘಾಟನಾ ಸಮಾರಂಭದಲ್ಲಿ ಕಾರ್ಮಿಕ ಸಚಿವರನ್ನು ರಾಜ್ಯ ಸರ್ಕಾರವನ್ನು ನಿರ್ಲಕ್ಷಿಸಿ, ಶಿಷ್ಟಾಚಾರ ಉಲ್ಲಂಘನೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮ ಖಂಡನೀಯವಾಗಿದೆ ಎಂದು ಕಾರ್ಮಿಕ ಇಲಾಖೆ ಗರಂ ಆಗಿದೆ.

ಕರ್ನಾಟಕ ರಾಜ್ಯ ಕಾರ್ಮಿಕರ ವಿಮಾ ಯೋಜನೆಗಳು ಸೇವೆಗಳ ಇಲಾಖೆ, ಬೆಂಗಳೂರು ರಾಜ್ಯ ಸರ್ಕಾರದಿಂದ ಆಸ್ಪತ್ರೆಗೆ ಅಗತ್ಯವಿರುವ ಭೂಮಿ. ಕಟ್ಟಡ ನಿರ್ಮಾಣ ಮತ್ತು ರೋಗಿಗಳ ಉಪಯೋಗಕ್ಕಾಗಿ ಹಲವು ಯಂತ್ರೋಪಕರಣಗಳನ್ನು ನೀಡಿ ಕಾರ್ಮಿಕರಿಗೆ ಅನುಕೂಲ ಕಲ್ಪಿಸಲಾಗಿರುತ್ತದೆ. ಈ ಎಲ್ಲಾ ಸವಲತ್ತುಗಳನ್ನು ನೀಡಿ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ವಿಮಾ ನಿಗಮದಡಿ ಆಸ್ಪತ್ರೆಯ ಕಟ್ಟಡವನ್ನು ನಿರ್ಮಿಸಲಾಗಿರುತ್ತದೆ. ಈ ಎಲ್ಲಾ ಯಶಸ್ಸು ರಾಜ್ಯ ಸರ್ಕಾರದ ಮುಖ್ಯ ಮಂತ್ರಿಗಳಿಗೆ, ಉಪ ಮುಖ್ಯ ಮಂತ್ರಿಗಳಿಗೆ ಮತ್ತು ಕಾರ್ಮಿಕ ಇಲಾಖೆಗೆ ಸಲ್ಲುತ್ತದೆ ಎಂದು ತಿಳಿಸಿದೆ.

Key words: Violation, etiquette, central government, Minister, Santosh Lad