ಮಂಡ್ಯ. ಏಪ್ರಿಲ್, 30,2026 (www.justkannada.in): ಶೀಲ ಶಂಕಿಸಿ ಪತ್ನಿಯನ್ನು ಕೊಲೆಗೈದಿದ್ದ ಅಪರಾಧಿಗೆ ಮಂಡ್ಯದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
ಅಜ್ವಲ್ ಖಾನ್ ಬಿನ್ (39) ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿ . ಈತ ಮೂಲತ: ರಾಮನಗರ ಪಟ್ಟಣ ಎಕ್ಸ್ ಟೆನ್ಸನ್ ಲೇಔಟ್ ವಾಸಿಯಾಗಿದ್ದು, ನಂತರ ಮಂಡ್ಯ ಜಿಲ್ಲೆ ಮಳ್ಳವಳ್ಳಿ ತಾಲ್ಲೂಕಿನ ಧನಗೂರು ಗ್ರಾಮ ವಾಸವಾಗಿದ್ದನು, ಈತ.2006 ರಲ್ಲಿ ಸಲ್ಮಾ ಬೇಗಂ ಎಂಬುವವರನ್ನು ಮದುವೆಯಾಗಿದ್ದನು.
ಮದುವೆಯಾದ ನಂತರ ಮೂರು ವರ್ಷಗಳ ಕಾಲ ಅನ್ಯೂನ್ಯವಾಗಿದ್ದರು. ತದನಂತರ ಆರೋಪಿ ಅಜ್ವಲ್ ಖಾನ್ ಬಿನ್ ಸಲ್ಯಾ ಬೇಗಂ ಅವರ ಶೀಲದ ಮೇಲೆ ಅನುಮಾನ ಪಟ್ಟು. ಶೀಲ ಶಂಕಿಸಿ 2023 ಮೇ 8 ರಂದು ಸಲ್ಮಾ ಬೇಗಂನನ್ನು ಕೊಲೆಗೈದಿದ್ದನು. ಈ ಸಂಬಂಧ ಆರೋಪಿತನ ವಿರುದ್ಧ ಕಲಂ.498(ಎ),120(ಬಿ), 302 ರೆ/ವಿ 34 ಐ.ಪಿ.ಸಿ ಅಡಿ ಹಲಗೂರು ಪೊಲೀಸರು ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಸದರಿ ಪ್ರಕರಣದ ವಿಚಾರಣೆ ನಡೆಸಿದ ಮಂಡ್ಯದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಯೀದುನ್ನಿಸಾ ಅವರು ಸಾಕ್ಷ್ಯಧಾರಗಳನ್ನು ಪರಿಗಣಿಸಿ ಕಲಂ. 498(ಎ), 120(ಬಿ), 302 ಐ.ಪಿ.ಸಿ ರೀತ್ಯಾ ಆರೋಪಿಯು ತನ್ನ ಮಗನೊಂದಿಗೆ (ಕಾ.ಸ.ಒ.ಬಾ) ಸೇರಿ ತನ್ನ ಪತ್ನಿಯ ಕೊಲೆ ಮಾಡಿರುವುದು ವಿಚಾರಣೆಯಿಂದ ದೃಡಪಟ್ಟಿದೆ ಎಂದು ಘೋಷಿಸಿದರು. ಹಾಗೆಯೇ ಆರೋಪಿ ಅಜ್ವಲ್ ಖಾನ್ ಬಿನ್ ಗೆ ಭಾದಂಸಂ ಕಲಂ. 302 ರ ಅಡಿಯಲ್ಲಿನ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಮತ್ತು 1,00,000/- ರೂಪಾಯಿ ದಂಡ. ಮತ್ತು ಭಾದಂಸಂ ಕಲಂ. 120(ಬಿ)ರ ಅಡಿಯಲ್ಲಿನ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಮತ್ತು 1.00.000/- ರೂಪಾಯಿ ದಂಡ, ಭಾದಂಸಂ ಕಲಂ.498(ಎ)ರ ಅಡಿಯಲ್ಲಿನ ಅಪರಾಧಕ್ಕೆ 2 ವರ್ಷಗಳ ಸಜೆ ಮತ್ತು 25,000/- ರೂ ದಂಡ ವಿಧಿಸಿ ಶಿಕ್ಷೆಯ ತೀರ್ಪು ಪ್ರಕಟಿಸಿದರು.
ಮೃತರ ಮಕ್ಕಳಿಗೆ ಕಾನೂನು ಸೇವಾ ಪ್ರಾಧಿಕಾರಿದಂದ ಪರಿಹಾರ ನೀಡಲು ಕೋರ್ಟ್ ಆದೇಶಿಸಿದೆ. ಅಭಿಯೋಜನೆಯ ಪರವಾಗಿ ಸರ್ಕಾರಿ ಅಭಿಯೋಜಕ ನಾಗರಾಜ ಕೆ. ರವರು ವಾದ ಮಂಡಿಸಿದ್ದರು
Key words: Life sentence, husband, killed, wife, Mandya







