ರಾಯಚೂರು,ಏಪ್ರಿಲ್,29,2026 (www.justkannada.in): ಮಲ್ಲಿಕಾರ್ಜುನ ಖರ್ಗೆ ಸಿಎಂ ಆದರೆ ಸಂತೋಷ ಸ್ವಾಗತಿಸುತ್ತೇವೆ ಎಂಬ ಗೃಹ ಸಚಿವ ಪರಮೇಶ್ವರ್ ಹೇಳಿಕೆ ಕುರಿತು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿದ ಯತೀಂಧ್ರ ಸಿದ್ದರಾಮಯ್ಯ, ಸಿಎಂ ಸಿದ್ದರಾಮಯ್ಯರನ್ನು ಹೈಕಮಾಂಡ್ ಕೆಳಗಿಸಿದರೆ ಆ ಪ್ರಶ್ನೆ ಬರುತ್ತದೆ. ಆ ತರಹ ಆದಾಗ ಖಂಡಿತ ಮಾತನಾಡುತ್ತೇನೆ. ಹೈಕಮಾಂಡಗ ನಿರ್ಧಾರ ಸ್ವಾಗತಿಸುತ್ತೇವೆ ಎಂದರು.
ಮೇ15ರಲ್ಲಿ ರಾಜ್ಯದಲ್ಲಿ ರಾಜಕೀಯ ಕ್ರಾಂತಿ ವಿಚಾರ, ನವೆಂಬರ್ ನಿಂದಲೂ ಹೇಳುತ್ತಿದ್ದಾರೆ ನಾನು ಉತ್ತರ ಕೊಡುತ್ತಿದ್ದೇನೆ ಈಗಾಗಲೇ ಹೇಳೋದನ್ನೆಲ್ಲಾ ಹೇಳಿದ್ದೇನೆ. ಈ ಬಗ್ಗೆ ಮಾತಾಡಲ್ಲ ಈ ಬಗ್ಗೆ ಹೈಕಮಾಂಡ್ ಅಥವಾ ಸಿಎಂ ಸಿದ್ದರಾಮಯ್ಯರನ್ನೇ ಕೇಳಿ ಎಂದರು.
Key words: Kharge, CM, statement, MLC Yatindra Siddaramaiah







