Sunday, September 13, 2026

BDA Apartments

ಧರ್ಮಸ್ಥಳದಿಂದ ವಾಪಸ್ಸಾಗುವಾಗ ದುರಂತ: ನಾಲೆಗೆ ಕಾರು ಬಿದ್ದು ತಾಯಿ ಮಗು ಸಾವು...
Home Crime ಧರ್ಮಸ್ಥಳದಿಂದ ವಾಪಸ್ಸಾಗುವಾಗ ದುರಂತ: ನಾಲೆಗೆ ಕಾರು ಬಿದ್ದು ತಾಯಿ ಮಗು ಸಾವು

ಧರ್ಮಸ್ಥಳದಿಂದ ವಾಪಸ್ಸಾಗುವಾಗ ದುರಂತ: ನಾಲೆಗೆ ಕಾರು ಬಿದ್ದು ತಾಯಿ ಮಗು ಸಾವು

ಹಾಸನ,ಏಪ್ರಿಲ್,29,2026 (www.justkannada.in): ಧರ್ಮಸ್ಥಳದಿಂದ ವಾಪಸ್ ಆಗುವಾಗ ಚಾಲಕನ ನಿಯಂತ್ರಣ ತಪ್ಪಿ ಸ್ವಿಫ್ಟ್ ಕಾರು ಹೇಮಾವತಿ ನಾಲೆಗೆ ಬಿದ್ದು ತಾಯಿ ಮಗು ಇಬ್ಬರು ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಮಲ್ಲನಘಟ್ಟ ಬಳಿ ನಡೆದಿದೆ.

ತಾಯಿ ಪ್ರಿಯಾಕ(30), ಒಂದುವರೆ ವರ್ಷದ ಮಗು ವೈಭವ್ ಮೃತಪಟ್ಟವರು. ಘಟನೆಯಲ್ಲಿ ನಾಲ್ವರು ಗಂಭೀರ ಗಾಯಗೊಂಡಿದ್ದು ಚನ್ನರಾಯಪಟ್ಟಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ದೇವನಹಳ್ಳಿ ಮೂಲದ ಕುಟುಂಬ ಧರ್ಮಸ್ಥಳಕ್ಕೆ ಹೋಗಿ ವಾಪಸ್ ಆಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಮಲ್ಲನಘಟ್ಟ ಬಳಿ ಹೇಮಾವತಿ ನಾಲೆಗೆ ಬಿದ್ದಿದೆ. ಈ ವೇಳೆ ತಾಯಿ ಮಗು ಅಸುನೀಗಿದ್ದಾರೆ. ಚನ್ನರಾಯಪಟ್ಟಣ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Key words:  Mother, child, die, car, falls, canal