Sunday, September 13, 2026

BDA Apartments

ಕಾಂಗ್ರೆಸ್ ನಲ್ಲಿ 100ಕ್ಕೆ 100 ಗೊಂದಲ ಇರೋದು ನಿಜ- ಸಚಿವ ಸತೀಶ್ ಜಾರಕಿಹೊಳಿ BDA JK_Adv BD...
Home Front Page ಕಾಂಗ್ರೆಸ್ ನಲ್ಲಿ 100ಕ್ಕೆ 100 ಗೊಂದಲ ಇರೋದು ನಿಜ- ಸಚಿವ ಸತೀಶ್ ಜಾರಕಿಹೊಳಿ

ಕಾಂಗ್ರೆಸ್ ನಲ್ಲಿ 100ಕ್ಕೆ 100 ಗೊಂದಲ ಇರೋದು ನಿಜ- ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ,ಏಪ್ರಿಲ್,25,2026 (www.justkannada.in):  ಕಾಂಗ್ರೆಸ್ ನಲ್ಲಿ 100ಕ್ಕೆ 100 ಗೊಂದಲ ಇರೋದು ನಿಜ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಮುಸ್ಲೀಂ ಮುಖಂಡರಿಂದ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ,  ಕಾಂಗ್ರೆ ಪಕ್ಷದಲ್ಲಿ 100ಕ್ಕೆ 100ರಷ್ಟು ಗೊಂದಲ ಇರೋದು ನಿಜ. ಒಳಮೀಸಲಾತಿಯಂತೆ ಇದು ಕೂಡ ಸರಿ ಹೋಗುತ್ತೆ ಎಂದರು.

ಪಕ್ಷದಲ್ಲಿ ಸಮಸ್ಯೆ ಇರೋದು ಸಹಜ.  ಸಿಎಂ, ಡಿಸಿಎಂ ಸಂಫುಟ ಪುನಾರಚನೆ ವಿಚಾರದಲ್ಲಿ ಗೊಂದಲವಿದೆ. ಸಮಸ್ಯೆ ಇತ್ಯರ್ಥಪಡಿಸುವಂತೆ ಹೈಕಮಾಂಡ್ ಗೆ ಮನವಿ ಮಾಡಿದ್ದೇವೆ.  ಎಲ್ಲವೂ ಸರಿಯಾಗುತ್ತದೆ. ನಮ್ಮ ಹೈಕಮಾಂಡ್ ಎಲ್ಲವನ್ನು ಬಗೆಹರಿಸುತ್ತಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

Key words:  true, 100% confusion , Congress,  Minister, Satish Jarkiholi