Wednesday, July 29, 2026

BDA Apartments

Home Front Page ಸಂಪುಟ ಪುನಾರಚನೆ: ಹೈಕಮಾಂಡ್ ನಿರ್ಧಾರದಂತೆ ನಡೆದುಕೊಳ್ಳುತ್ತೇನೆ- ಗೃಹ ಸಚಿವ ಡಾ.ಜಿ.ಪರಮೇಶ್ವರ್

ಸಂಪುಟ ಪುನಾರಚನೆ: ಹೈಕಮಾಂಡ್ ನಿರ್ಧಾರದಂತೆ ನಡೆದುಕೊಳ್ಳುತ್ತೇನೆ- ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು,ಏಪ್ರಿಲ್,22,2026 (www.justkannada.in): ರಾಜ್ಯ ಸಚಿವ ಸಂಪುಟ ಪುನಾರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಹೈಕಮಾಂಡ್ ನಿರ್ಧಾರದಂತೆ ನಾನು ನಡೆದುಕೊಳ್ಳುತ್ತೇನೆ ಎಂದಿದ್ದಾರೆ.

ಈ ಕುರಿತು ಮಾತನಾಡಿದ ಗೃಹ ಸಚಿವ ಪರಮೇಶ್ವರ್,  ಸಂಪುಟ ಪುನಾರಚನೆ ಹೈಕಮಾಂಡ್ ಸಿಎಂಗೆ ಬಿಟ್ಟಿದ್ದು. ಸಚಿವ ಸಂಪುಟ ಬಗ್ಗೆ ನಾವು ಮತಾಡಿದರೆ ಅಪ್ರಸ್ತುತ ಆಗುತ್ತೆ. ಹೈಕಮಾಂಡ್ ನಿರ್ಧಾರ ಮಾಡಿದಂತೆ ನಾನು ನಡೆದುಕೊಳ್ಳುತ್ತೇನೆ ಎಂದರು.

ಸಿಎಂಗೆ ಮಾಟ ಮಂತ್ರ ಮಾಡಿಸಿರಬಹುದು ಎಂಬ ಕೆಎನ್ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ  ಗೃಹ ಸಚಿವ ಪರಮೇಶ್ವರ್, ರಾಜಣ್ಣಗೆ ಮಾಹಿತಿ ಇರಬಹುದು ಇಲ್ಲ ಯಾರಾದರೂ ಹೇಳಿರಬಹುದು ಅದಕ್ಕೆ ಹಾಗೆ ಹೇಳಿರಬೇಕು ಎಂದರು.

Key words: Cabinet reshuffle, High Command, decision, Dr.G.Parameshwar