Saturday, September 5, 2026

BDA Apartments

Home Front Page ಇಡಿ ದಾಳಿ: ಕೇಂದ್ರದಿಂದ ಕಾಂಗ್ರೆಸ್ ಅನ್ನೇ ಟಾರ್ಗೆಟ್ ಮಾಡೋ ಕೆಲಸ- ಸಿಎಂ ಸಿದ್ದರಾಮಯ್ಯ

ಇಡಿ ದಾಳಿ: ಕೇಂದ್ರದಿಂದ ಕಾಂಗ್ರೆಸ್ ಅನ್ನೇ ಟಾರ್ಗೆಟ್ ಮಾಡೋ ಕೆಲಸ- ಸಿಎಂ ಸಿದ್ದರಾಮಯ್ಯ

ಚಾಮರಾಜನಗರ,ಏಪ್ರಿಲ್,21,2026 (www.justkannada.in):  ಕಾಂಗ್ರೆಸ್ ಶಾಸಕ ಹ್ಯಾರಿಸ್, ನಲಪಾಡ್ ನಿವಾಸ ಕಚೇರಿ ಮೇಲೆ ಇಡಿ ದಾಳಿ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಕಾಂಗ್ರೆಸ್ ಅನ್ನು ಟಾರ್ಗೆಟ್ ಮಾಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ,    ಕಾಂಗ್ರೆಸ್ ಅನ್ನೇ ಟಾರ್ಗೆಟ್ ಮಾಡಿ ಇಡಿ ದಾಳಿ ನಡೆಸಿದೆ.  ಕೇಂದ್ರ ಸರ್ಕಾರದಿಂದ ಟಾರ್ಗೆಟ್ ಮಾಡೋ ಕೆಲಸವಾಗುತ್ತಿದೆ ಎಂದರು.

ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಲ್ಲಿ ಗೊಂದಲ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಅಲ್ಪಸಂಖ್ಯಾತರ ಜೊತೆ ಚರ್ಚಿಸಿಯೇ  ಶಾಮನೂರು ಶಿವಶಂಕರಪ್ಪ ಮೊಮ್ಮಗ ಸಮರ್ಥ್ ಗೆ ಟಿಕೆಟ್ ಕೊಟ್ಟಿದ್ದು., ಅಲ್ಪಸಂಖ್ಯಾತ ನಾಯಕರ ಜೊತೆ ಸಭೆ ಮಾಡಿದ್ದವು ಎಂದು ಸ್ಪಷ್ಟಪಡಿಸಿದರು.

Key words: ED raid,  targeted, Congress, CM Siddaramaiah