ರಾಹುಲ್ ಗಾಂಧಿಗೆ ಪತ್ರ ವಿಚಾರ: ನಾವೆಲ್ಲರೂ ಚರ್ಚಿಸಿ ಸರಿ ಮಾಡಿಕೊಳ್ತೇವೆ- ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಏಪ್ರಿಲ್,21,2026 (www.justkannada.in):  ಮುಸ್ಲೀಂ ಮುಖಂಡರಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಪಕ್ಷದಲ್ಲಿ ಏನೇ ಇದ್ದರೂ ಚರ್ಚಿಸಿ ನಾವೆಲ್ಲಾ ಸರಿಮಾಡಿಕೊಳ್ಳುತ್ತೇವೆ ಎಂದಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ರಾಹುಲ್ ಗಾಂಧಿಯವರು ಪತ್ರವನ್ನ ಪರಿಶೀಲನೆ ಮಾಡುತ್ತಾರೆ ನಾವು ಯಾವಾಗಲೂ ಅಲ್ಪಸಂಖ್ಯಾತರಿಗೆ ಪ್ರಾಧಾನ್ಯತೆ ಕೊಟ್ಟಿದ್ದೇವೆ.  ರಾಜ್ಯಸಭೆಗೆ ಟಿಕೆಟ್ ಕೊಟ್ಟಿದ್ದೇವೆ. ಪರಿಷತ್ ಸದಸ್ಯರನ್ನಾಗಿ ಮಾಡಿದ್ದೇವೆ.  ಪಕ್ಷ ಶಾಮನೂರು ಮೊಮ್ಮಗನಿಗೆ ಟಿಕೆಟ್ ಕೊಟ್ಟಿದೆ ಸಾಮಾನ್ಯವಾಗಿ ಯಾರಾದರೂ ತೀರಿಕೊಂಡರೇ  ಅವರ ಕುಟುಂಬಕ್ಕೆ ಟಿಕೆಟ್ ಕೊಡುತ್ತೇವೆ  ಹಾಗಂತ ಅಲ್ಪಸಂಖ್ಯಾತರು ಕಾಂಗ್ರೆಸ್ ಟಿಕೆಟ್ ಕೇಳಿದ್ದು ತಪ್ಪೇನಿಲ್ಲ. ಪಕ್ಷದಲ್ಲಿ ಏನೇ ಇದ್ದರೂ ಚರ್ಚಿಸಿ ನಾವೆಲ್ಲಾ ಸರಿಮಾಡಿಕೊಳ್ಳುತ್ತೇವೆ ಎಂದರು.

ಶಾಸಕ ಹ್ಯಾರಿಸ್ ಮನೆ ಮೇಲೆ ಇಡಿ ದಾಳಿ ವಿಚಾರ ಒಳಗಿನ ವಿಚಾರಗಳು ನಮಗೆ ತಿಳಿದಿಲ್ಲ ಶಾಸಕ ಹ್ಯಾರಿಸ್ ಇಬ್ಬರು ಮಕ್ಕಳ ಮನೆ ಮೇಲೆ ದಾಳಿಯಾಗಿದೆ.  ದಾಳಿ ಬಗ್ಗೆ ಇಡಿ ಅಧಿಕಾರಿಗಳೇ ಮಾಹಿತಿ ನೀಡಬೇಕು. ಪ್ರಕರಣ ತನಿಖೆಗೆ ಸರ್ಕಾರ ಈ ಹಿಂದೆಯೇ ಎಸ್ ಐಟಿ ರಚಿಸಿತ್ತು. ಎಸ್ ಐಟಿ ಅಧಿಕಾರಿಗಳು ಇನ್ನೂ ಕೇಸ್ ನ ಚಾರ್ಜ್ ಶೀಟ್ ಸಲ್ಲಿಸಿಲ್ಲ. ಬೇಗ ತನಿಖೆ ಮುಗಿಸಲು ಸೂಚನೆ ನೀಡಿದ್ದೇವೆ. ಮಧ್ಯಂತರ ವರದಿ ಕೊಡಲು ಹೇಳಿದ್ದೇವೆ.  ಎಸ್ ಐಟಿ ಅಧಿಕಾರಿಗಳಿದಲೂ ಇಡಿ ಮಾಹಿತಿ ಪಡೆದಿರಬಹುದು ಬಿಟ್ ಕೇಸ್ ಸಂಬಂಧ  ದಾಳಿ ಅಂತಾ ಇಡಿ ಹೇಳಬೇಕು ಎಂದರು.

Key words:  Letter, Rahul Gandhi, discuss, resolve, Home Minister, Parameshwar