Friday, October 2, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಮತ್ತೆ ಬಿಜೆಪಿ ಸರ್ಕಾರ ಪತನವಾಗುತ್ತೆ-ಭವಿಷ್ಯ ನುಡಿದ್ರಾ ಬಿಜೆಪಿ ಮುಖಂಡ…?

ಮತ್ತೆ ಬಿಜೆಪಿ ಸರ್ಕಾರ ಪತನವಾಗುತ್ತೆ-ಭವಿಷ್ಯ ನುಡಿದ್ರಾ ಬಿಜೆಪಿ ಮುಖಂಡ…?

ಬೆಳಗಾವಿ,ಅ,28,2019(www.justkannada.in): ಬಿಜೆಪಿಯಲ್ಲಿ 8 ಶಾಸಕರು ಬಂಡಾಯವೆದ್ದರೆ ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಪತನವಾಗುತ್ತದೆ ಎಂದು ಬಿಜೆಪು ಮುಖಂಡ ರಾಜುಕಾಗೆ ಹೇಳಿಕೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಇಂದು ಮಾತನಾಡಿದ ಮಾಜಿ ಶಾಸಕ ರಾಜುಕಾಗೆ,  ಬಿಜೆಪಿಯಲ್ಲಿ ಈಗಾಗಲೇ 106 ಶಾಸಕರಿದ್ದಾರೆ. ಪಕ್ಷ ಬಹುಮತಕ್ಕೆ ಇನ್ನು 8 ಶಾಸಕರ ಅವಶ್ಯಕತೆ ಇದೆ. ಉಪಚುನಾವಣೆಯಲ್ಲಿ 15 ಕ್ಷೇತ್ರಗಳ ಪೈಕಿ 8ರಲ್ಲಿ ಗೆಲ್ಲಲೇಬೇಕು. ಒಂದು ವೇಳೆ  8 ಶಾಸಕರು ಬಂಡಾಯವೆದ್ದರೇ ಮತ್ತೆ ಬಿಜೆಪಿ ಸರ್ಕಾರ ಬೀಳಲಿದೆ ಎಂದು ತಿಳಿಸಿದರು.

ಅನರ್ಹ ಶಾಸಕರ ತ್ಯಾಗದಿಂದಲೇ ಬಿಜೆಪಿ ಸರ್ಕಾರ ರಚನೆಯಾಗಿದೆ ಎಂಬುದು ಭ್ರಮೆ. ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾಗಿದೆ ಎಂಬುದು ಹೈಕಮಾಂಡ್ ಭ್ರಮೆಯಾಗಿದೆ. ಸಿಎಂ ಬಿಎಸ್ ಯಡಿಯೂರಪ್ಪ ನನಗೆ ಟಿಕೆಟ್ ನೀಡಲ್ಲ ಎಂದು ಹೇಳಿದ್ದಾರೆಂದು ಬಿಜೆಪಿ ಮುಖಂಡ ರಾಜು ಕಾಗೆ ತಿಳಿಸಿದರು.

Key words: BJP government – falling –again-Predict-BJP leader.