ಮಹಿಳಾ ಮೀಸಲಾತಿಯಲ್ಲಿ ರಾಜಕೀಯ: ಮೋದಿ ಸಾಮಾಜಿಕ ನ್ಯಾಯದ ಪರ ಇಲ್ಲ- ಸಿಎಂ ಸಿದ್ದರಾಮಯ್ಯ

ಮೈಸೂರು,ಏಪ್ರಿಲ್,20,2026 (www.justkannada.in):  ಮಹಿಳಾ ಮೀಸಲಾತಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಮಾಡುತ್ತಿದ್ದಾರೆ. ಮೋದಿ ಸಾಮಾಜಿಕ ನ್ಯಾಯದ ಪರ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮಹಿಳಾ ಮೀಸಲಾತಿಯಲ್ಲಿ ಅವರು ರಾಜಕೀಯ ಮಾಡ್ತಿದ್ದಾರೆ. 2023 ರಲ್ಲಿ ಯಾಕೆ ಜಾರಿ ಮಾಡಲಿಲ್ಲ. ಈಗ ಭ್ರೂಣ ಹತ್ಯೆ ಅಂತ ಹೇಳುತ್ತಿದ್ದಾರೆ. ನರೇಂದ್ರ ಮೋದಿ ಸಾಮಾಜಿಕ ನ್ಯಾಯದ ಪರ ಇಲ್ಲ. ಇದ್ದಿದ್ದರೆ ಬಹಳ ಹಿಂದೆನೇ ಮಹಿಳಾ ಮೀಸಲಾತಿ ಜಾರಿ ಮಾಡುತ್ತಿದ್ದರು. 2023  ಪ್ರಕಾರ ಮೀಸಲಾತಿ ಜಾರಿ ಮಾಡಿ ಅಂತ ನಮ್ಮ ತಕರಾರು. ಡಿಲಿಮಿಟೇಷನ್ ಮಾತ್ರ ಹೊಸದಾಗಿ ಮಾಡಿ ಅಂತ ಕೇಳುತ್ತಿದ್ದೇವೆ. ಯುಪಿ 126 ಕರ್ನಾಟಕ 46 ನಮಗಿಂತ ಜಾಸ್ತಿ ಆಗತ್ತದೆ. ಹೀಗಾಗಿ ಸೆನ್ಸಸ್ ಮಾಡಿ ಸಮಾನವಾಗಿ ಹಂಚಬೇಕು. ಇದು ನಮ್ಮ ಉದ್ದೇಶ. ದಕ್ಷಿಣ ಭಾರತದಲ್ಲಿ ಪಾಪ್ಯುಲೇಷನ್ ಕಂಟ್ರೋಲ್ ಮಾಡಿದ್ದೇವೆ. ಉತ್ತರ ಪ್ರದೇಶದ ಕಡೆ ಮಾಡಿಲ್ಲ. ಇದು ಸಮಸ್ಯೆಯಾಗಿ ನಮಗೆ ತೊಂದರೆಯಾಗುತ್ತದೆ ಎಂದರು.

ಮಹಿಳಾ ಮೀಸಲಾತಿಯಲ್ಲಿ  ಮೋದಿ ರಾಜಕೀಯ ಮಾಡ್ತಿದ್ದಾರೆ. 2/3 ಮೆಜಾರಿಟಿ ಇಲ್ಲ ಅಂದರೂ ಬಿಲ್ ತಂದ್ದರು ಎಂದು ಕಿಡಿಕಾರಿದರು.

ನಾನು ಮೋದಿ ಇಬ್ಬರು ಗುಟ್ಟಾಗಿ ಏನು ಮಾತನಾಡಿಲ್ಲ

ಬೆಂಗಳೂರಿನ ಏರ್ಪೋರ್ಟ್ ನಲ್ಲಿ ಪಿಎಂ – ಸಿಎಂ ಗುಟ್ಟಾಗಿ ಚರ್ಚೆ ನಡೆಸಿದ್ದಾರೆಂಬ ಫೋಟೋ  ವೈರಲ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ನಾನು ಮೋದಿ ಇಬ್ಬರು ಗುಟ್ಟಾಗಿ ಏನು ಮಾತನಾಡಿಲ್ಲ. ಮಹಿಳಾ ಮೀಸಲಾತಿ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅಂತ ಕೇಳಿದ್ದರು. ನಾನು ಮಹಿಳಾ ಮೀಸಲಾತಿ  ಪರವಾಗಿದ್ದೇನೆ ಅಂತ ಹೇಳಿದ್ದೇನೆ ಅಷ್ಟೇ. ಅದರಲ್ಲಿ ಬೇರೇನಿಲ್ಲ ಎಂದು ಸ್ಪಷ್ಟಪಡಿಸಿದರು.

ತಮಿಳುನಾಡಿನ ಪ್ರಚಾರಕ್ಕೆ ನಾನು ಹೋಗಿಲ್ಲ

ಇನ್ನು ತಮಿಳುನಾಡಿನ ಪ್ರಚಾರಕ್ಕೆ ನಾನು ಹೋಗಿಲ್ಲ. ನನಗಿರುವ ಮಾಹಿತಿ ಪ್ರಕಾರ ಡಿಎಂಕೆ ಗೆಲ್ಲುತ್ತದೆ. ಕೇರಳ ನಾವು ಗೆಲ್ಲುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಉತ್ತರ ಭಾರತದಲ್ಲಿ ಬಿಜೆಪಿ ಗ್ಯಾರಂಟಿ ಕಾಪಿ ಮಾಡುತ್ತಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ನಮ್ಮ ಗ್ಯಾರಂಟಿಗಳನ್ನು ಬಿಜೆಪಿ ವಿರೋಧ ಮಾಡಿತ್ತು. ಮೋದಿ ಕೂಡ ವಿರೋಧ ಮಾಡಿದ್ದರು. ರಾಜ್ಯ ಆರ್ಥಿಕ ದಿವಾಳಿ ಆಗತ್ತೆ ಅಂದಿದ್ದರು. ಇದೀಗ ನಮ್ಮ ಗ್ಯಾರಂಟಿ ಕಾಪಿ ಮಾಡುತ್ತಿದ್ದಾರೆ. ಇದರಿಂದ ಅವರ ಡಬಲ್ ಸ್ಟ್ಯಾಂಡ್ ಗೊತ್ತಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಶಾಸಕ ಹ್ಯಾರಿಸ್ ಮನೆ ಮೇಲೆ ಇಡಿ ದಾಳಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ನನಗೆ ಮಾಹಿತಿ ಇಲ್ಲ ಎಂದರು.

Key words: Politics,  women’s reservation, PM, Modi, CM, Siddaramaiah