Saturday, September 5, 2026

BDA Apartments

Home Front Page ಬಿಜೆಪಿಯವರ ಮನೆಗಳ ಮೇಲೂ ಇಡಿ ದಾಳಿ ಮಾಡಬೇಕಿತ್ತು- ಸಚಿವ ಪ್ರಿಯಾಂಕ್ ಖರ್ಗೆ ಕಿಡಿ

ಬಿಜೆಪಿಯವರ ಮನೆಗಳ ಮೇಲೂ ಇಡಿ ದಾಳಿ ಮಾಡಬೇಕಿತ್ತು- ಸಚಿವ ಪ್ರಿಯಾಂಕ್ ಖರ್ಗೆ ಕಿಡಿ

ಬೆಂಗಳೂರು,ಏಪ್ರಿಲ್,20,2026 (www.justkannada.in):  ಕಾಂಗ್ರೆಸ್ ಶಾಸಕ ಎನ್.ಎ ಹ್ಯಾರಿಸ್ , ಪುತ್ರ ನಲಪಾಡ್ ನಿವಾಸದ ಮೇಲೆ ಇಡಿ ದಾಳಿಯಾಗಿರುವ ಕುರಿತು ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಬಿಟ್ ಕಾಯಿನ್ ಪ್ರಕರಣ ಸಂಬಂಧ ಇಡಿ ದಾಳಿ ಮಾಡಿದ್ದಾರೆ. ಅದೇ ರೀತಿ ಬಿಜೆಪಿಯವರ ಮನೆಗಳ ಮೇಲೂ ರೇಡ್ ಮಾಡಬೇಕಿತ್ತು. ಹಿಂದಿನ ಸರ್ಕಾರದಲ್ಲಿ ಯಾರು ಗೃಹ ಸಚಿವರು ಇದ್ದರು. ಯಾರೆಲ್ಲಾ ಆಗಿನ ಆಡಳಿತದಲ್ಲಿ ಇದ್ದರು ಎಲ್ಲವೂ ಗೊತ್ತಿದೆ ಅಲ್ವಾ?

ಈಗ ಯಾವ ವಿಚಾರಕ್ಕೆ ನಲಪಾಡ್ ಮನೆ ಮೇಲೆ ದಾಳಿಯಾಗಿದೆ. ಈ ಬಗ್ಗೆ ಇಡಿ ಚಾರ್ಚ್ ಶೀಟ್ ಹಾಕಲಿ ನೋಡೋಣ.  ಇಡಿ, ಐಟಿ, ಸಿಬಿಐ ಕೇಂದ್ರ ಸರ್ಕಾರದ ಕೈಗೊಂಬೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

Key words: ED, raid, BJP, Minister, Priyank Kharge