Wednesday, September 9, 2026

BDA Apartments

Home Crime ಮಂಡ್ಯ ಕಾರಾಗೃಹದಲ್ಲಿ ಗಾಂಜಾ, ಮೊಬೈಲ್ ಪತ್ತೆ : ಪ್ರಕರಣ ದಾಖಲು

ಮಂಡ್ಯ ಕಾರಾಗೃಹದಲ್ಲಿ ಗಾಂಜಾ, ಮೊಬೈಲ್ ಪತ್ತೆ : ಪ್ರಕರಣ ದಾಖಲು

ಮಂಡ್ಯ ,ಏಪ್ರಿಲ್,20,2026 (www.justkannada.in): ಮಂಡ್ಯದ ಕಾರಾಗೃಹದಲ್ಲಿ ಗಾಂಜಾ ಮತ್ತು ಮೊಬೈಲ್ ಗಳು ಪತ್ತೆಯಾಗಿದ್ದು ಈ ಕುರಿತು ಪ್ರಕರಣ ದಾಖಲಾಗಿದೆ.

ಮಂಡ್ಯ ಕಾರಾಗೃಹದಲ್ಲಿ ಸೀನಿಮಿಯ ಶೈಲಿಯಲ್ಲಿ ಗಾಂಜಾ ಜೈಲಿಗೆ ಪೂರೈಕೆ ಆಗುತ್ತಿದ್ದು, ಕಾರಾಗೃಹದ ಸಿಸಿಟಿವಿ ಕ್ಯಾಮೆರಾದಲ್ಲಿಇದು ಸೆರೆಯಾಗಿದೆ. ಜೈಲಿನ ಕಾಂಪೌಂಡ್ ಬಳಿ ಬೈಕ್ ನಲ್ಲಿ ಬಂದಂತಹ ಇಬ್ಬರು ಖದೀಮರು ಪ್ಲಾಸ್ಟಿಕ್ ಸುತ್ತಿದಂತಹ ಬಾಲ್ ಅನ್ನು ಕಾಂಪೌಂಡ್ ಒಳಗಡೆ ಎಸೆದಿದ್ದಾರೆ.

ನಂತರ ಈ ಬಾಲನ್ನು ಕೈದಿ ನಾಗ ಎಂಬಾತ  ತೆಗೆದುಕೊಂಡಿದ್ದು ಈ ಎಲ್ಲಾ ಚಲನವಲನಗಳನ್ನು ಜೈಲಾಧಿಕಾರಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಗಮನಿಸಿದ್ದಾರೆ. ನಂತರ ನಾಗನ ಸೆಲ್ ಪರಿಶೀಲನೆ  ನಡೆಸಿ ಬಾಲ್ ಓಪನ್ ಮಾಡಿದಾಗ ಹತ್ತು ಗ್ರಾಂ ಗಾಂಜಾ ಮತ್ತು ಒಂದು ಮೊಬೈಲ್ ಪತ್ತೆಯಾಗಿದೆ ಎನ್ನಲಾಗಿದೆ. ಈ ಕುರಿತು ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Marijuana, mobile, found, Mandya jail