ನವದೆಹಲಿ, ಏಪ್ರಿಲ್,18,2026 (www.justkannada.in): ಮಹಿಳಾ ಮೀಸಲಾತಿ ಮಸೂದೆ ಸೋತಿರುವುದು ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ವಿರೋಧ ಪಕ್ಷಗಳ ಏಕತೆಯ ಗೆಲುವಾಗಿದೆ ಎಂದು ಕಾಂಗ್ರೆಸ್ ನಾಯಕಿ ಹಾಗೂ ಸಂಸದೆ ಪ್ರಿಯಾಂಕ ಗಾಂಧಿ ನುಡಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕ ಗಾಂಧಿ, ಮಹಿಳಾ ಮೀಸಲಾತಿಯ ಹೆಸರಿನಲ್ಲಿ ಕೇಂದ್ರ ಸರ್ಕಾರ ದೇಶದ ಒಕ್ಕೂಟ ವ್ಯವಸ್ಥೆಯನ್ನು ಬದಲಾವಣೆ ಮಾಡಲು ಸಂಚು ರೂಪಿಸಿತ್ತು. ಆದರೆ ನಿನ್ನೆ ನಡೆದದ್ದು ಪ್ರಜಾಪ್ರಭುತ್ವದ ದೊಡ್ಡ ಗೆಲುವು. 2023ರ ಮಹಿಳಾ ಮೀಸಲಾತಿ ಕಾಯ್ದೆಯನ್ನು ಪ್ರಸ್ತುತ ಲೋಕಸಭೆಯ ಸದಸ್ಯರ ಸಂಖ್ಯೆಯ ಆಧಾರದ ಮೇಲೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
2029ರೊಳಗೆ ಕ್ಷೇತ್ರ ಮರುವಿಂಗಡಣೆಯಾಗದಿದ್ದರೆ ತಮ ರಾಜಕೀಯ ಲಾಭಕ್ಕೆ ಧಕ್ಕೆಯಾಗುತ್ತದೆ ಎಂಬ ಕಾರಣದಿಂದ ಮಹಿಳಾ ಮೀಸಲಾತಿಯೊಂದಿಗೆ ಸಂಸತ್ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸುವ ಕ್ರಮ ಕೈಗೊಂಡಿದ್ದರು. ಮಹಿಳಾ ಮೀಸಲಾತಿ ಮಸೂದೆಗೆ ವಿರೋಧ ಪಕ್ಷಗಳು ಬೆಂಬಲ ನೀಡಲು ಸಾಧ್ಯವಾಗಲಿಲ್ಲ. ಆದರೆ, ಏಕತೆಯಿಂದ ಇದ್ದರೆ ಸರ್ಕಾರವನ್ನು ಸೋಲಿಸಬಹುದು ಎಂಬುದನ್ನು ಇದು ತೋರಿಸಿದೆ ಎಂದು ಪ್ರಿಯಾಂಕ್ ಗಾಂಧಿ ತಿಳಿಸಿದರು.
Key words: Defeat, Women’s Reservation Bill, Priyanka Gandhi







