ಬೆಂಗಳೂರು,ಏಪ್ರಿಲ್,18,2026 (www.justkannada.in): ಚುನಾವಣೆಗಾಗಿ ಮಹಿಳಾ ಮೀಸಲಾತಿಯನ್ನ ಮುನ್ನೆಲೆಗೆ ತಂದಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಬಿಜೆಪಿಗೆ ಕುಟುಕಿದರು.
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಬಿಲ್ ಗೆ ಸೋಲಾದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಇಷ್ಟು ವರ್ಷ ಬಿಜೆಪಿ ನಾಯಕರು ಏನು ಮಾಡುತ್ತಿದ್ದರು ಚುನಾವಣೆಗಾಗಿ ಮಹಿಳಾ ಮೀಸಳಾತಿ ಮುನ್ನಲೆಗೆ ತಂದಿದ್ದಾರೆ. ಮಹಿಳೆಗೆ ಮೀಸಲಾತಿ ಕೊಡಬೇಕೆಂದು ಹೇಳಿದ್ದೇ ಕಾಂಗ್ರೆಸ್ ಎಂದರು.
ಇನ್ನು ಹಿಂದಿ ಭಾಷೆ ಅಂಕ ವಿಷಯಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶ ಕುರಿತು ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ, ಪಿಐಎಲ್ ಹಾಕಿರುವುದಕ್ಕೆ ಕೋರ್ಟ್ ಆದೇಶ ಮಾಡಿದೆ. ಶಿಕ್ಷಕರು ಪಿಐಎಲ್ ವಾಪಸ್ ತೆಗೆದುಕೊಂಡಿದ್ದಾರೆ. ಸಿಎಂ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಕೋರ್ಟ್ ಆದೇಶ ಪಾಲನೆ ಮಾಡುತ್ತೇವೆ. ಕೋರ್ಟ್ ಮರುಪರಿಶೀಲನೆ ಮಾಡಿ ಅಂತ ಎಲ್ಲೂ ಹೇಳಿಲ್ಲ. 2025-26ರಲ್ಲಿ ಏನು ಮಾಡಿದ್ರಿ ಅದನ್ನ ಮಾಡಿ ಅಂದಿದೆ. ಪಿಐಎಲ್ ಹಾಕಿದ ಮಗು ವಿಚಾರದ ಬಗ್ಗೆ ಮಾತ್ರ ಪರಿಶೀಲನೆ ಈ ವಿಚಾರ ಬಗ್ಗೆ ಕೋರ್ಟ್ ಮಂಗಳವಾರ ಸಮಯ ನೀಡಿದೆ ಅಂದು ಕೋರ್ಟ್ ಆದೇಶ ಮೇಲೆ ಎಜಿ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.
Key words: Women’s reservation, elections, Minister, Madhu Bangarappa, BJP







