Saturday, September 5, 2026

BDA Apartments

Home Front Page ಮಹಿಳಾ ಮೀಸಲಾತಿ ಮಸೂದೆಗೆ ಸೋಲು: ಕಾಂಗ್ರೆಸ್ ವಿರುದ್ದ ಬಿಎಸ್ ವೈ ಕಿಡಿ

ಮಹಿಳಾ ಮೀಸಲಾತಿ ಮಸೂದೆಗೆ ಸೋಲು: ಕಾಂಗ್ರೆಸ್ ವಿರುದ್ದ ಬಿಎಸ್ ವೈ ಕಿಡಿ

ಚಿಕ್ಕಮಗಳೂರು,ಏಪ್ರಿಲ್,18,2026 (www.justkannada.in): ಸಂಸತ್ ವಿಶೇಷ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆ  ಮತ್ತು ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಬಹುಮತ ಸಿಗದೆ ಸೋಲಾಗಿದ್ದು ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿರುದ್ದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕಿಡಿಕಾರಿದ್ದಾರೆ.

ಚಿಕ್ಕಮಗಳೂರಿನಲ್ಲಿ ಎಂಎಲ್ ಸಿ ಸಿ.ಟಿ ರವಿ ಭೇಟಿ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಬಿಎಸ್ ಯಡಿಯೂರಪ್ಪ, ಮಹಿಳಾ ಮೀಸಲಾತಿ ಮಸೂದೆ ವಿರೋಧಿಸಿದ್ದು ತಪ್ಪು  ಮಹಿಳ ಮೀಸಲಾತಿ ಬಗ್ಗೆ ವಿರೋಧ ಮಾಡುವುದನ್ನ ಕಾಂಗ್ರೆಸ್ ನಿಲ್ಲಿಸಬೇಕು.  ಮಹಿಳಾ ಮೀಸಲಾತಿ ಮಸೂದೆ ವಿರೋಧ ಮಾಡುವುದು ಸಮಾನತೆಗೆ ವಿರೋಧ  ಎಂದು ವಾಗ್ದಾಳಿ ನಡೆಸಿದರು.

ಏ.16 ರಂದು ಲೋಕಸಭೆಯಲ್ಲಿ ಅರ್ಜುನ್ ರಾಮ್ ಮೇಘವಾಲ್ ಅವರು ಮಹಿಳಾ ಮೀಸಲಾತಿ ಮಸೂದೆ  ಮತ್ತು ಕ್ಷೇತ್ರ ಮರುವಿಂಗಡಣೆ ಮಂಡಿಸಿದ್ದರು. ನಿನ್ನೆ ಮತದಾನ ನಡೆದಿದ್ದು ಕಾಂಗ್ರೆಸ್ ಸೇರಿ ವಿಪಕ್ಷಗಳು ಮಸೂದೆ ವಿರುದ್ದ ಮತ ಚಲಾಯಿಸಿದ ಹಿನ್ನೆಲೆ ಮಸೂದೆಗೆ ಸೋಲಾಯಿತು.

Key words: Women’s Reservation Bill, BS Yeddyurappa Congress