ಸರಗೂರು, ಏಪ್ರಿಲ್, 18,2026 (www.justkannada.in): ಹಾದನೂರು ಗ್ರಾಮ ಹೊರವಲಯದಲ್ಲಿ ಮತ್ತೆ ಹುಲಿ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.
ಸರಗೂರು ತಾಲೂಕು ಹೆಡಿಯಾಲ ಅರಣ್ಯ ಪ್ರದೇಶದಿಂದ ಕಾಡಿನಿಂದ ನಾಡಿನತ್ತ ಬಂದ ಹುಲಿ, ಬೆಳಗ್ಗೆ ಜಮೀನು ಮಧ್ಯದಲ್ಲಿ ಕಾಣಿಸಿಕೊಂಡು ಗ್ರಾಮಸ್ಥರ ನಿದ್ದೆ ಕೆಡಿಸಿದೆ. ಹೊಲದ ಮಧ್ಯೆ ಅಲೆದಾಡಿದ ಹುಲಿಯನ್ನು ಕಂಡ ಗ್ರಾಮಸ್ಥರು ಬೆಚ್ಚಿಬಿದ್ದು, ಚೀರಾಟ ಮಾಡಿ ಕಾಡಿನತ್ತ ಹಿಮ್ಮೆಟ್ಟಿಸಲು ಪ್ರಯತ್ನಿಸಿದ್ದಾರೆ.
ಗ್ರಾಮದ ಕೆರೆಯ ಸಮೀಪದ ಕೃಷಿ ಜಮೀನಿನ ಬೇಲಿಯ ಪೊದೆಗಳಿಂದ ಹೊರಬಂದ ಹುಲಿ ದಿಕ್ಕಾಪಾಲಾಗಿ ಓಡಾಡಿದ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಕುರಿ, ಮೇಕೆ ಹಾಗೂ ಇತರ ಜಾನುವಾರುಗಳ ಮೇಲೆ ದಾಳಿ ಮಾಡಲು ಹೊಂಚು ಹಾಕಿ ಕುಳಿತಿದ್ದ ಹುಲಿ, ಜನರ ಕೂಗಿಗೆ ಬೆದರಿ ಪರಾರಿಯಾಗಿದೆ.
ಸ್ಥಳಕ್ಕೆ ಕರ್ನಾಟಕ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆಡಿಯಾಲ ವಲಯದ ಅರಣ್ಯಾಧಿಕಾರಿ ಪರಮೇಶ್ ನೇತೃತ್ವದಲ್ಲಿ ತಂಡ ಹುಲಿಯ ಹೆಜ್ಜೆ ಗುರುತುಗಳನ್ನು ಪರಿಶೀಲಿಸಿದ್ದು, ಗ್ರಾಮಸ್ಥರ ಮಾಹಿತಿ ಆಧರಿಸಿ ಸಾಕು ಆನೆಗಳ ಸಹಾಯದಿಂದ ಹುಲಿಯನ್ನು ಸೆರೆ ಹಿಡಿಯಲು ಸಿದ್ಧತೆ ನಡೆಸಲಾಗಿದೆ.
ಗ್ರಾಮದಲ್ಲಿ ಭೀತಿ ಮುಂದುವರಿದಿರುವ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆ ಜನರಿಗೆ ಎಚ್ಚರಿಕೆ ನೀಡಿದ್ದು, ರಾತ್ರಿ ವೇಳೆ ಹೊರಗೆ ಓಡಾಡದಂತೆ ಸೂಚಿಸಿದೆ.
ENGLISH SUMMARY…
Tiger Scare in Hadanur Village
Sargur, April 17: A tiger was spotted near Hadanur village, creating panic among residents.
The tiger reportedly entered from the nearby forest and was seen roaming in agricultural fields early morning. Villagers raised alarms and managed to drive it back toward the forest.
The animal was seen moving near farmland bushes close to a village lake, with visuals captured on mobile phones. It was allegedly waiting to attack livestock but fled after hearing people shout.
Officials from the Karnataka Forest Department visited the spot, inspected pugmarks, and began tracking its movement. Preparations are underway to capture the tiger using trained elephants.
Authorities have warned villagers to remain alert and avoid venturing out at night.
Key words: Tiger, threat, again, Hadanur village







